ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ನಿಟ್ಟೆಯ 2 ವಿದ್ಯಾಥಿಗಳು ಆಯ್ಕೆ

ನಿಟ್ಟೆ, ಕಾರ್ಕಳ, ಆ.31: ಪಂಜಾಬ್‌ನ ಪಟಿಯಾಲದದಲ್ಲಿ ಅ.15ರಿಂದ 20ರವರೆಗೆ ನಡೆಯಲಿರುವ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ನಿಟ್ಟೆಯ ಡಾ.ಎನ್‌ಎಸ್‌ಎಎಂ ಇಂಗ್ಲೀಷ್ ಮಾಧ್ಯಮ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಆಗಸ್ಟ್ 26ರಿಂದ 29ರವರೆಗೆ ರಾಯಚೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಕ್ಲಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ನಿಟ್ಟೆಯ ಡಾ. ಎನ್‌ಎಸ್‌ಎಎಂ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವರ್ಷಿತ್ ಗೌಡ ಹಾಗೂ ಕುಶಿ ಜೆ. ಶೆಟ್ಟಿ ಅವರು ನಾಲ್ಕು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ವರ್ಷಿತ್ ಗೌಡ ಮತ್ತು ಕುಶಿ ಜೆ. ಶೆಟ್ಟಿ ತಮ್ಮ ತಮ್ಮ ವಿಭಾಗಗಳಲ್ಲಿ 1,500 ಮೀ ಮತ್ತು 3,000 ಮೀ ಓಟಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು. ಇದರಿಂದ ಇಬ್ಬರನ್ನೂ ಪಟಿಯಾಲದಲ್ಲಿ ನಡೆಯುವ ರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಸ್ಪರ್ಧಿಸಲು ಆಯ್ಕೆ ಮಾಡಲಾಗಿದೆ ಎಂದು ನಿಟ್ಟೆ ವಿದ್ಯಾಸಂಸ್ಥೆಯ ಪ್ರಕಟಣೆ ತಿಳಿಸಿದೆ.
Next Story




