ಮಾ. 2ರಂದು ದೇವದಾಸಿಯರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ

ಉಡುಪಿ: ‘ಗಾಡ್ಸ್ ವೈವ್ಸ್, ಮೆನ್ಸ್ ಸ್ಲೇವ್ಸ್’ ಎಂಬ ದೇವದಾಸಿ ಯರ ಅಂತ್ಯವಿಲ್ಲದ ಕಥೆಗಳ ಸಾಕ್ಷ್ಯಚಿತ್ರವನ್ನು ಮಾರ್ಚ್ 2ರಂದು ಬೆಳಗ್ಗೆ 9:30ಕ್ಕೆ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಮಣಿಪಾಲದ ಪ್ಲಾನೆಟೋರಿಯಂ (ತಾರಾಲಯ) ಸಭಾಂಗಣದಲ್ಲಿ ಪ್ರದರ್ಶಿಸಲಾಗುತ್ತದೆ.
ಚಿತ್ರದ ನಿರ್ದೇಶಕಿ- ನಿರ್ಮಾಪಕಿ ಪೂರ್ಣಿಮಾ ರವಿ ಮತ್ತು ಅದರ ಕಾರ್ಯನಿರ್ವಾಹಕ ನಿರ್ದೇಶಕ ರವಿನಾರಾಯಣ ಈ ಸಂದರ್ಭ ಉಪಸ್ಥಿತರಿದ್ದು ಪ್ರೇಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಅಮೆರಿಕದಲ್ಲಿ ನಡೆದ ಇಂಪ್ಯಾಕ್ಟ್ ಡಾಕ್ಯುಮೆಂಟರಿ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಚಿತ್ರ ಮಾನ್ಯತಾ ಪ್ರಶಸ್ತಿಯನ್ನು ಗೆದ್ದಿದೆ.
ಈ ಚಿತ್ರ ಬೆಳ್ತಂಗಡಿ ಮೂಲದ ನಿರ್ದೇಶಕಿ ಪೂರ್ಣಿಮಾ ರವಿ ಅವರ ಪಿಎಚ್‌ಡಿ ಸಂಶೋಧನೆಯ ಭಾಗವಾಗಿದ್ದು, ಪ್ರಾಧ್ಯಾಪಕಿ-ಲೇಖಕಿ ಡಾ. ನಯನ ಕಶ್ಯಪ್ ಮಾರ್ಗದರ್ಶನ ಮಾಡಿದ್ದಾರೆ.
Next Story





