ಮೇ 20ರ ಸಾರ್ವತ್ರಿಕ ಮುಷ್ಕರ ಮುಂದೂಡಿಕೆ

ಉಡುಪಿ ಮೇ 17: ದೇಶದ ಈಗಿನ ಪರಿಸ್ಥಿತಿಯನ್ನು ಪರಿಗಣಿಸಿ ಮೇ 20ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಮುಂದೂಡಲು ಜೆಸಿಟಿಯು ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹಾಗೂ ಜೆಸಿಟಿಯು ಸಂಚಾಲಕ ಕವಿರಾಜ್ ಎಸ್.ಕಾಂಚನ್ ತಿಳಿಸಿದ್ದಾರೆ.
ಈ ಸಾರ್ವತ್ರಿಕ ಮುಷ್ಕರವನ್ನು ಜುಲೈ 9ರಂದು ನಡೆಸಲು ಜೆಸಿಟಿಯು ಭಾಗವಾಗಿರುವ ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳು ಒಮ್ಮತದಿಂದ ನಿರ್ಧರಿಸಿವೆ. ಮೇ 20ರಂದು ಕೆಲಸದ ಸ್ಥಳ/ಸ್ಥಳೀಯ/ಜಿಲ್ಲಾ ಮಟ್ಟದಲ್ಲಿ ಮುಷ್ಕರಕ್ಕೆ ಸಜ್ಜುಗೊಳಿಸಲು ಕಾರ್ಯಕ್ರಮಗಳನ್ನು ನಡೆಸಲು ಕರೆ ನೀಡಲಾಗಿದೆ. ಹಾಗೆಯೇ ಮುಷ್ಕರದ ಅಂಗವಾಗಿ ನಡೆಸುತ್ತಿರುವ ಪ್ರಚಾರ, ಅಭಿಯಾನಗಳನ್ನು ಮುಂದುವರಿಸಬೇಕು ಎಂದು ಅವರು ಜಂಟಿ ಪತ್ರಿಕಾ ಹೇಳಿಕೆ ತಿಳಿಸಿದ್ದಾರೆ.
Next Story





