Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಯಕ್ಷ ರಂಗಾಯಣ ಇನ್ನು ಮುಂದೆ ‘ಕರಾವಳಿ...

ಯಕ್ಷ ರಂಗಾಯಣ ಇನ್ನು ಮುಂದೆ ‘ಕರಾವಳಿ ರಂಗಾಯಣ’ 2026-27ನೇ ಸಾಲಿನ ರೆಪರ್ಟರಿಗೆ ಸಿದ್ಧತೆ: ವೆಂಕಟರಮಣ ಐತಾಳ

ವಾರ್ತಾಭಾರತಿವಾರ್ತಾಭಾರತಿ22 Jun 2026 8:08 PM IST
share
ಯಕ್ಷ ರಂಗಾಯಣ ಇನ್ನು ಮುಂದೆ ‘ಕರಾವಳಿ ರಂಗಾಯಣ’ 2026-27ನೇ ಸಾಲಿನ ರೆಪರ್ಟರಿಗೆ ಸಿದ್ಧತೆ: ವೆಂಕಟರಮಣ ಐತಾಳ

ಉಡುಪಿ, ಜೂ.22: ಪ್ರಾದೇಶಿಕ ಭಾಷೆ ಹಾಗೂ ಸಾಂಸ್ಕೃತಿಕ ಸೊಗಡನ್ನು ಜೀವಂತವಾಗಿಡಲು 2002ರಲ್ಲಿ ಕಾರ್ಕಳ ದಲ್ಲಿ ಪ್ರಾರಂಭಗೊಂಡ ರಂಗಾಯಣದ ಆರನೇ ಶಾಖೆ ‘ಯಕ್ಷ ರಂಗಾಯಣ’ದ ಹೆಸರನ್ನು ‘ಕರಾವಳಿ ರಂಗಾಯಣ’ ಎಂದು ಮರು ನಾಮಕರಣಗೊಳಿಸಿದೆಯೆಂದು ಪ್ರಸ್ತುತ ಯಕ್ಷ ರಂಗಾಯಣದ ನಿರ್ದೇಶಕರಾಗಿರುವ ಬಿ.ಆರ್. ವೆಂಕಟರಮಣ ಅವರು ತಿಳಿಸಿದ್ದಾರೆ.

ಉಡುಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಯಕ್ಷ ರಂಗಾಯಣ ಎಂಬ ಶೀರ್ಷಿಕೆ ಸಾಹಿತಿಗಳು, ವಿದ್ವಾಂಸರು ಹಾಗೂ ಜನಸಾಮಾನ್ಯ ಗೊಂದಲಕ್ಕೆ ಕಾರಣವಾಗಿತ್ತು. ಯಕ್ಷಗಾನಕ್ಕೆ ಈಗಾಗಲೇ ಯಕ್ಷಗಾನ ಅಕಾಡೆಮಿ ಇರುವ ಕಾರಣ, ಅದರ ಅರ್ಥ ವ್ಯಾಪ್ತಿಯನ್ನು ವಿಸ್ತರಿಸಲು, ಯಕ್ಷಗಾನವೂ ಸೇರಿದಂತೆ ಕರಾವಳಿ ಕಲೆಗಳ ಸತ್ವ ಹಾಗೂ ಸೊಗಡನ್ನು ಒಳಗೊಂಡು ಇಲ್ಲಿನ ರಂಗಭೂಮಿಯನ್ನು ಕಟ್ಟಿ ಬೆಳೆಸುವ ಗುರಿಯೊಂದಿಗೆ 1993ರ ರಂಗಾಯಣ ಬೈಲಾದಲ್ಲಿ ಬಿ.ವಿ.ಕಾರಂತರೇ ಉಲ್ಲೇಖಿಸಿದಂತೆ ‘ಕರಾವಳಿ ರಂಗಾಯಣ’ ಎಂದು ಬದಲಾಯಿಸಿ ಸರಕಾರ ಆದೇಶ ಹೊರಡಿಸಿದೆ ಎಂದರು.

ದೇಶದ ಪ್ರಮುಖ ರಂಗಕರ್ಮಿಗಳಲ್ಲಿ ಒಬ್ಬರಾದ ಬಿ.ವಿ.ಕಾರಂತರು ನಿರ್ದೇಶಕರಾಗಿ 1989ರಲ್ಲಿ ಮೈಸೂರಿನಲ್ಲಿ ರಂಗಾಯಣ ಪ್ರಾರಂಭಗೊಂಡಿದ್ದು, ಬಳಿಕ ರಾಜ್ಯದ ಪ್ರಾದೇಶಿಕ ಭಾಷೆ ಮತ್ತು ಸಾಂಸ್ಕೃತಿಕ ಸೊಗಡನ್ನು ಜೀವಂತವಿರಿಸಲು ಧಾರವಾಡ, ಶಿವಮೊಗ್ಗ, ಗುಲ್ಬರ್ಗ ಹಾಗೂ ದಾವಣಗೆರೆಯ ಬಳಿಕ ಆರನೇ ಶಾಖೆಯಾಗಿ ಕಾರ್ಕಳದಲ್ಲಿ ಕರಾವಳಿಗಾಗಿ ಯಕ್ಷ ರಂಗಾಯಣವನ್ನು ಪ್ರಾರಂಭಿಸಲಾಗಿತ್ತು. 2022ರ ಮಾ.10ರಂದು ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿದ್ದರು ಎಂದರು.

ಜೀವನ್‌ರಾಂ ಸುಳ್ಯ ಅವರು ಯಕ್ಷ ರಂಗಾಯಣದ ಪ್ರಥಮ ನಿರ್ದೇಶಕರಾಗಿದ್ದು, ಬಳಿಕ ಬಿ.ಆರ್.ವೆಂಕಟರಮಣ ಐತಾಳ್ ಇದರ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆಧುನಿಕ ರಂಗಭೂಮಿಯ ಪರಿಕಸ್ಪನೆಯಲ್ಲಿ ಯಕ್ಷಗಾನವನ್ನು ಕಟ್ಟುವ ಹಾಗೂ ಯಕ್ಷಗಾನದ ಪುರಾಣ, ಕತೆ, ಕಾವ್ಯಗಳನ್ನು ಬಳಸಿಕೊಂಡು ರಂಗಭೂಮಿ ಕಟ್ಟುವ ಜೊತೆಗೆ ಕರಾವಳಿಯ ಶ್ರೀಮಂತ ಪ್ರಾದೇಶಿಕ ಸಾಂಸ್ಕೃತಿಕ ವೈವಿದ್ಯತೆಯನ್ನು ಜನತೆಗೆ ಪರಿಚಯಿ ಸುವುದು ತಮ್ಮ ಗುರಿಯಾಗಿದೆ ಎಂದು ಐತಾಳ್ ತಿಳಿಸಿದರು.

ಕರಾವಳಿ ರಂಗಾಯಣದ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯ ಅದಕ್ಕಾಗಿ ಮೀಸಲಿಟ್ಟ ಮೂರು ಎಕರೆ ಜಾಗದಲ್ಲಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಯುವಜನತೆಯನ್ನು ಸಾಂಸ್ಕೃತಿಕ ಲೋಕದತ್ತ ಸೆಳೆಯಲು ರಂಗಶಿಬಿರಗಳು, ಯಕ್ಷಗಾನ ತರಬೇತಿ, ರಂಗತಾಂತ್ರಿಕ ತರಬೇತಿ, ನಾಟಕ ರಚನಾ ಕಮ್ಮಟ, ಅಭಿನಯ-ಮಾತುಗಾರಿಕೆ ತರಬೇತಿ, ವಿಚಾರ ಸಂಕಿರಣ, ಮಕ್ಕಳ ಶಿಬಿರ, ಜಾನಪದ ಕಮ್ಮಟ, ಕಾಲೇಜು ರಂಗೋತ್ಸವ, ನಾಟಕೋತ್ಸವ ಮುಂತಾದವುಗಳನ್ನು ಆಯೋಜಿಸಲಾಗಿದೆ ಎಂದರು.

ಯಕ್ಷ ರಂಗಾಯಣವು 2025-26ನೇ ಸಾಲಿನಲ್ಲಿ 12ಮಂದಿ ರೆಪರ್ಟರಿ ಕಲಾವಿದರನ್ನು ನೇಮಕ ಮಾಡಿಕೊಂಡು ನಾಲ್ಕು ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಿದೆ. ವಿವಿದೆಡೆಗಳಲ್ಲಿ ಇದರ 70ಕ್ಕೂ ಅಧಿಕ ಪ್ರದರ್ಶನಗಳು ನಡೆದಿವೆ. ಅದೇ ರೀತಿ 2026-27ನೇ ಸಾಲಿನಲ್ಲೂ 12 ಮಂದಿಯುಳ್ಳ ರೆಪರ್ಟರಿ ತಂಡವನ್ನು ನೇಮಿಸಿಕೊಂಡು 3-4 ನಾಟಕಗಳನ್ನು ತಿರುಗಾಟದ ಮೂಲಕ ಪ್ರದರ್ಶಿಸಲು ತಯಾರಿ ನಡೆಯುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಹಾಗೂ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿರಿದ್ದರು.

ಡಾ.ಶಿವರಾಮ ಕಾರಂತ ಟ್ರಸ್ಟ್ ಚಟುವಟಿಕೆ

ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲೇ ಬರುವ ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಧ್ಯೇಯೋದ್ದೇಶ ಗಳನ್ನು, ಸಾಧನೆಗಳನ್ನು ವಿವರಿಸಿದ ಟ್ರಸ್ಟ್‌ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಸರಕಾರ 2002ರಲ್ಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟ್ರಸ್ಟ್ ರಚಿಸಿದ್ದರೂ, 2024ರಲ್ಲಿ ಅದಕ್ಕೆ ಹೊಸ ರೂಪ ನೀಡಿ, ತಮ್ಮ ಅಧ್ಯಕ್ಷತೆಯಲ್ಲಿ 9 ಮಂದಿ ಕ್ರಿಯಾಶೀಲ ಸದಸ್ಯರ ಸಮಿತಿ ರಚಿಸಿತು ಎಂದರು.

ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ತಮ್ಮ ನೇತೃತ್ವದಲ್ಲಿ ಕಾರಂತರ ಕುರಿತಂತೆ ನಾಡಿನಾದ್ಯಂತ 54 ಕಾರ್ಯ ಕ್ರಮಗಳನ್ನು ನಡೆಸಲಾಗಿದೆ. ಅರಿವಿನ ಬೆಳಕು ಉಪನ್ಯಾಸ ಮಾಲಿಕೆ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿ ಗಾಗಿ ಚಿತ್ರಕಲೆ ಹಾಗೂ ರಂಗೋಲಿಯಲ್ಲಿ ಕಾರಂತರ ಬದುಕು-ಬರಹ ಪರಿಚಯ, ಕತೆ, ಕಾದಂಬರಿ, ನಾಟಕಗಳ ಕುರಿತು ಅಧ್ಯಯನ ಶಿಬಿರಗಳನ್ನು ನಡೆಸಲಾಗಿದೆ ಎಂದರು.

2026ರ ಅಕ್ಟೋಬರ್ ತಿಂಗಳಿನಿಂದ ಡಾ.ಕಾರಂತರ 125ನೇ ಜನ್ಮ ದಿನಾಚರಣೆಯನ್ನು ವೈವಿಧ್ಯಮಯವಾಗಿ ಆಚರಿಸಲು ನಿರ್ಧರಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಎರಡು ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಇದೆ. ಅಲ್ಲದೇ ಅಧ್ಯಯನ ಶಿಬಿರ, ರಂಗ ಪ್ರಯೋಗಗಳು, ಮಕ್ಕಳಿಗಾಗಿ ಕಾರಂತ, ವಿವಿಧ ಸ್ಪರ್ಧೆಗಳನ್ನು ಆಯೋಜಿಸ ಲಾಗುವುದು ಎಂದು ಡಾ.ಗಣನಾಥ ಎಕ್ಕಾರು ತಿಳಿಸಿದರು.




share
ವಾರ್ತಾಭಾರತಿ
ವಾರ್ತಾಭಾರತಿ
Next Story
X