ಬಾಷ್ ಕಂಪೆನಿಯ ನೂತನ ರೆಫ್ರಿಜರೇಟರ್‌ಗಳ ಅನಾವರಣ

ಉಡುಪಿ, ಮಾ.10: ಉಡುಪಿ ಸಿಟಿ ಬಸ್ ನಿಲ್ದಾಣದ ಸಮೀಪದ ಹರ್ಷ ಮಳಿಗೆಯಲ್ಲಿ ಹರ್ಷೋತ್ಸವದ ಪ್ರಯುಕ್ತ ಬಾಷ್ ಅಂತಾರಾಷ್ಟ್ರೀಯ ಕಂಪೆನಿಯ ಜರ್ಮನ್ ಉತ್ಪನ್ನ ನೂತನ ರೆಫ್ರಿಜರೇಟರ್‌ಗಳ ಅನಾವರಣ ಕಾರ್ಯಕ್ರಮ ಮಂಗಳವಾರ ಜರಗಿತು.
ನೂತನ ಬಾಷ್ ಉತ್ಪನ್ನಗಳನ್ನು ಅನಾವರಣಗೊಳಿಸಿದ ಡೈಜಿ ವರ್ಲ್ಡ್ ಮಿಡಿಯಾ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ, ಹರ್ಷ ಸಂಸ್ಥೆಯ ಬೆಳವಣಿಗೆ ಹಾಗೂ ಯಶಸ್ವಿ ಇಂದಿನ ಯುವಜನತೆಗೆ ರೋಲ್ ಮಾಡೆಲ್ ಆಗಿದೆ. ಯಾವುದೇ ಸಂಸ್ಥೆಯ ಯಶಸ್ವಿಯಲ್ಲಿ ಅಲ್ಲಿನ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯವಾಗಿದೆ. ಹರ್ಷ ಸಂಸ್ಥೆಯ ಕಸ್ಟಮರ್ ಕೇರ್ ತುಂಬಾ ಉತ್ತಮವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಬಾಷ್ ನ್ಯಾಷನಲ್ ಚಾನೆಲ್ ಹೆಡ್ ರಾಬಿ ದೇವಸಿಯಾ, ಬಾಷ್ ಕ್ಲಸ್ಟರ್ ಮುಖ್ಯಸ್ಥ ಆದಿತ್ಯ, ಹರ್ಷ ಎಚ್‌ಆರ್ ನಿರ್ದೇಶಕ ಸುರೇಶ್ ಎಂ., ಕ್ಲಸ್ಟರ್ ಮೆನೇಜರ್ ರೋನ್ಸನ್ ಡಿಸೋಜ, ಸ್ಟೋರ್ ಮೆನೇಜರ್ ಅಭಿನ್ ಪೂಜಾರಿ ಉಪಸ್ಥಿತರಿದ್ದರು. ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.
Next Story





