ಪ್ರತ್ಯೇಕ ಇಸ್ಪೀಟು ಜುಗಾರಿ ಪ್ರಕರಣ: 22 ಮಂದಿ ಸೆರೆ

ಕುಂದಾಪುರ, ಸೆ.6: ಕರ್ಕುಂಜೆ ಗ್ರಾಮದ ಮುಕ್ಕೋಡು ರಾಜೀವ ಶೆಟ್ಟಿ ಎಂಬವರ ಕ್ಯಾಟರಿಂಗ್ ಶೆಡ್‌ನಲ್ಲಿ ಸೆ.5ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 11 ಮಂದಿ ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಗುಲ್ವಾಡಿ ಬಿಜ್ರಿಯ ಚಂದ್ರಶೇಖರ(52), ಮಾರಣಕಟ್ಟೆಯ ಅಭಿಜಿತ್(33), ಅರೆಶಿರೂರಿನ ಸತೀಶ್ ಪೂಜಾರಿ(34),, ಭಟ್ಕಳದ ಗಣಪತಿ ವೀರಪ್ಪ ನಾಯ್ಕ್(34), ಮುರ್ಡೇಶ್ವರದ ಈಶ್ವರ ಹೊನ್ನಪ್ಪ ನಾಯ್ಕ್ (53), ಆಲೂರಿನ ಸುಬ್ಬಣ್ಣ(57), ಭಟ್ಕಳ ಶಿರಾಲಿಯ ಭಾಸ್ಕರ ಬೈರಪ್ಪ ನಾಯ್ಕ್(38), ಹೊನ್ನಾವರ ಹಳದಿಪುರದ ಮಂಜುನಾಥ(58), ಭಟ್ಕಳ ಚಿತ್ರಾಪುರದ ಸುರೇಶ ವೀರಪ್ಪ ನಾಯ್ಕ್(42), ಬೈಂದೂರು ನಾಕಟ್ಟೆಯ ವಿಜಯ(45) ಆನಗಳ್ಳಿ ಹೇರಿಕುದ್ರುವಿನ ನಿತೇಶ್(26) ಎಂದು ಗುರುತಿಸಲಾಗಿದೆ. ಇವರಿಂದ ಒಟ್ಟು 1,10,790ರೂ. ನಗದು, 12 ಮೊಬೈಲ್‌ಗಳು ಹಾಗೂ ಒಂದು ಸ್ಕೂಟರ್, ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ನೀಲಾವರ ಗ್ರಾಮದ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಮನೆಯಲ್ಲಿ ಸೆ.5ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ನೀಲಾವರ ಗ್ರಾಮದ ಸದಾಶಿವ ದೇವಾಡಿಗ(48), ಹೇರೂರು ಗ್ರಾಮದ ಪ್ರಸನ್ನ(43), ರಜಾಕ್(55), ಪೇತ್ರಿಯ ಭಾಸ್ಕರ(48), ಕೊಡವೂರು ಉದ್ದಿನಹಿತ್ಲುವಿನ ಅಶೋಕ(47), ತೆಂಕನಿಡಿಯೂರಿನ ಹರೀಶ್ ನಾಯ್ಕ (35), ಹನಮಂತ ನಗರದ ಚಂದ್ರಹಾಸ(40), ಬೇಳೂರು ಗ್ರಾಮದ ರವಿಕುಮಾರ(57), ಪೇತ್ರಿಯ ಶಶಿಕಾಂತ(36), ಕುಕ್ಕುಂಜೆಯ ಆನಂದ ಕೋಟ್ಯಾನ(63), ಸಂಪತ್(37) ಎಂಬವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 20,900ರೂ. ನಗದು, 11 ಮೊಬೈಲ್ ಫೋನ್‌ಗಳು, ಮೂರು ಕಾರು ಹಾಗೂ ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







