Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ...

ಉಡುಪಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಲ್ಲಿ ಶೇ. 23 ಕೊರತೆ

ವಾರ್ತಾಭಾರತಿವಾರ್ತಾಭಾರತಿ1 Jun 2026 9:36 PM IST
share
ಉಡುಪಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಲ್ಲಿ ಶೇ. 23 ಕೊರತೆ
► ಮುಂಗಾರು ಬೆಳೆಗೆ ನಡೆಯದ ಪೂರ್ವ ಸಿದ್ಧತೆ ► ಜಿಲ್ಲೆಯ ರೈತ ಕಂಗಾಲು

ಉಡುಪಿ, ಜೂ.1: ಕಳೆದ ವರ್ಷ ಮೇ ತಿಂಗಳಲ್ಲಿ ವಾಡಿಕೆಗಿಂತ ಶೇ.408ರಷ್ಟು ಅಧಿಕ ಮಳೆ ಸುರಿದು ಜಿಲ್ಲೆಯ ರೈತರ ಮೊಗದಲ್ಲಿ ನಗುವನ್ನು ಮೂಡಿಸಿದ್ದ ಮುಂಗಾರು ಪೂರ್ವ ಮಳೆ (ಪ್ರಿ ಮಾನ್ಸೂನ್), ಈ ಬಾರಿ ಮತ್ತೆ ತನ್ನ ಮುನಿಸನ್ನು ತೋರಿಸಿದೆ. ಈ ಬಾರಿ ಮೇ ತಿಂಗಳ ವಾಡಿಕೆ ಮಳೆಯಾದ 165 ಮಿ.ಮೀ. ಮಳೆಯಲ್ಲಿ ಸುರಿದಿದ್ದು 126 ಮಿ.ಮೀ. ಮಾತ್ರ. ಅಂದರೆ ಶೇ.23ರಷ್ಟು ಕೊರತೆ. ಇದು ಈ ಬಾರಿಯ ಮುಂಗಾರು ಕೃಷಿಯ ಕುರಿತಂತೆ ರೈತರಲ್ಲಿ ಮತ್ತೆ ಆತಂಕವನ್ನು ಮೂಡಿಸುವಂತಿದೆ.

ಅದೇ ಕಳೆದ ವರ್ಷ ಮೇ ತಿಂಗಳಲ್ಲಿ ವಾಡಿಕೆ ಮಳೆಯಾದ 165ಮಿ.ಮೀ. ಬದಲು ಸುರಿದಿದ್ದು ಒಟ್ಟು 836ಮಿ.ಮೀ. ಅಂದರೆ ಶೇ.408ರಷ್ಟು ಅಧಿಕ. ಆದರೆ ಈ ಬಾರಿ ಅಧಿಕ ಮಳೆಯ ಬದಲು ಮಳೆಯಲ್ಲಿ ಕೊರತೆ ಕಾಣಿಸಿ ಕೊಂಡಿರು ವುದರಿಂದ ಏಣೇಲು ಬೆಳೆ ಬೆಳೆಯಲು ಯಾವುದೇ ಪೂರ್ವಸಿದ್ಧತೆ ಯನ್ನು ಜಿಲ್ಲೆಯ ರೈತ ಮಾಡಿಕೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲ.

ಜೂ.1ರಿಂದ ಮಳೆಗಾಲ ಪ್ರಾರಂಭ ಎಂದೇ ಭಾವಿಸಲಾಗುತ್ತದೆ. ಸಂಪ್ರದಾಯದಂತೆ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಬೀಳಬೇಕು. ಆದರೆ ಜೂ.1 ಬಂದರೂ ಮಳೆಗಾಲ ಸದ್ಯಕ್ಕಂತಲೂ ಪ್ರಾರಂಭಗೊಳ್ಳುವ ಲಕ್ಷಣ ಇನ್ನೂ ಗೋಚರಿಸುತ್ತಿಲ್ಲ. ಮುಂಗಾರು ಮೇ 26ರಂದೇ ಕೇರಳ ಪ್ರವೇಶಿಸುವುದು ಎಂದು ಹವಾಮಾನ ಇಲಾಖೆ ಪ್ರಕಟಿಸಿತ್ತಾದರೂ, ಅದೀಗ ಜೂನ್ ಮೊದಲ ವಾರಕ್ಕೆ ಮುಂದೂಡಲ್ಪಟ್ಟಿದೆ. ಹೀಗಾಗಿ ಮುಂಗಾರು ಕರ್ನಾಟಕ ಕರಾವಳಿಗೆ ಕಾಲಿಡಲು ಇನ್ನೂ ಒಂದು ವಾರ ಕಾಯಬೇಕಾಗಬಹುದು.

ಇತ್ತೀಚಿನ ಹವಾಮಾನ ವರದಿ ಪ್ರಕಾರ ಕರ್ನಾಟಕ ಕರಾವಳಿಯಲ್ಲಿ ಜೂ.3 ಮತ್ತು 4ರಂದು ಜೋರಾದ ಮಳೆ ಸುರಿಯುವ ನಿರೀಕ್ಷೆ ಇದೆ. ಆದರೆ ಇದು ಮುಂಗಾರು ಮಳೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಎಲ್‌ನಿನೋದ ಪರಿಣಾಮ ಇದ್ದರೂ ಇರಬಹುದು ಈ ಬಾರಿ ಹವಾಮಾನ ಇಲಾಖೆಯ ಹೆಚ್ಚಿನೆಲ್ಲಾ ಭವಿಷ್ಯಗಳು ಕರಾವಳಿ ಕರ್ನಾಟಕದ ಮಟ್ಟಿಗೆ ಸುಳ್ಳಾಗುತ್ತಿದೆ. ಇಲಾಖೆಯ ಭವಿಷ್ಯ ನಿಜವಾಗಿದ್ದರೆ ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗಬೇಕಿತ್ತು. ಆದರೆ ಇಲ್ಲಿ ವಾಡಿಕೆ ಮಳೆಯೂ ಬಾರದೇ ಶೇ.23ರಷ್ಟು ಕೊರತೆ ಕಾಣಿಸಿಕೊಂಡಿದೆ!.

ಜಿಲ್ಲೆಯಲ್ಲಿ ಕಳೆದ ಜನವರಿ ಒಂದರಿಂದ ಮೇ 31ರವರೆಗೆ ಸುರಿದ ಮಳೆಯನ್ನು ಗಣನೆಗೆ ತೆಗೆದುಕೊಂಡರೆ ಅಲ್ಲೂ ಕೊರತೆಯೇ ಎದುರಾಗಿದೆ. ಈ ಅವಧಿಯಲ್ಲಿ ಈ ವರ್ಷ ಜಿಲ್ಲೆಯಲ್ಲಿ ಬಿದ್ದಿರುವುದು 169 ಮಿ.ಮೀ. ಮಳೆ ಮಾತ್ರ. ಆದರೆ ನಿಜವಾಗಿಯೂ ಸುರಿಯಬೇಕಿದ್ದ ವಾಡಿಕೆ ಮಳೆ 201ಮಿ.ಮೀ.. ಅಂದರೆ ಸಾಮಾನ್ಯಕ್ಕಿಂತ ಶೇ.16ರಷ್ಟು ಕೊರತೆ. ಅದೇ ಅವಧಿಯಲ್ಲಿ ಕಳೆದ ವರ್ಷ 938ಮಿ.ಮೀ.ಮಳೆ ಸುರಿದಿದ್ದು, ಶೇ.367ರಷ್ಟು ಅಧಿಕ ಮಳೆಯಾಗಿದೆ. ಇದರಿಂದ ಮಳೆಗಾಲ ಪ್ರಾರಂಭದ ಹೊತ್ತಿಗೆ ಜಿಲ್ಲೆಯ ರೈತ ಮುಂಗಾರು ಬೇಸಾಯಕ್ಕೆ ಬೇಕಾದ ಪೂರ್ವಸಿದ್ಧತೆ ಪ್ರಾರಂಭಿಸಿದ್ದ.

ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಬೀಳುವ ತಾಲೂಕುಗಳಲ್ಲಿ ಈ ಬಾರಿ ಅಧಿಕ ಮಳೆ ಕೊರತೆ ಕಂಡುಬಂದಿರು ವುದು ಹವಾಮಾನದಲ್ಲಿ ಉಂಟಾಗು ತ್ತಿರುವ ಭಾರೀ ಏರುಪೇರಿಗೆ ದ್ಯೋತಕ ಎನ್ನಬಹುದಾಗಿದೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಿರುವ ಕುಂದಾಪುರ ತಾಲೂಕಿನಲ್ಲಿ ಶೇ.43, ಬೈಂದೂರು ತಾಲೂಕಿನಲ್ಲಿ ಶೇ.31, ಹೆಬ್ರಿ ತಾಲೂಕಿನಲ್ಲಿ ಶೇ.28 ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ ಶೇ.50ರಷ್ಟು ಕೊರತೆ ಈ ಬಾರಿ ಕಂಡುಬಂದಿದೆ.

ಮಾರ್ಚ್‌ನಿಂದ ಜೂನ್ ಪ್ರಾರಂಭದವರೆಗೆ (ಅಥವಾ ಮಳೆಗಾಲ ಪ್ರಾರಂಭಗೊಳ್ಳುವವರೆಗೆ) ಕರಾವಳಿಯನ್ನು ಕಾಡುವ ಬಿಸಿಗಾಳಿ, ತೇವಾಂಶ ಭರಿತ ವಾತಾವರಣದಿಂದ ಮುಕ್ತಿ ಪಡೆಯಲು, ಬತ್ತಿದ ಬಾವಿ, ಕೆರೆ, ನದಿಗಳಲ್ಲಿ ನೀರಿನ ಸೆಲೆ ಮೂಡಲು, ಜಿಲ್ಲೆಯ ರೈತರು ಅಳಿದುಳಿದ ಬೇಸಾಯ ಯೋಗ್ಯ ಭೂಮಿಯನ್ನು ಕೃಷಿಗೆ ಸಜ್ಜುಗೊಳಿಸಲು ಮುಂಗಾರು ಪೂರ್ವ ಮಳೆ ಯಾವತ್ತೂ ಕರಾವಳಿಗೆ ಅವಶ್ಯಕವಾಗಿ ನಿಯಮಿತವಾಗಿ ಸುರಿಯಬೇಕಿದೆ. ಇದು ಇಲ್ಲಿನ ಅಗತ್ಯತೆ ಸಹ. ಮುಂಗಾರು ಪೂರ್ವ ಮಳೆ ಕೈಕೊಟ್ಟರೆ ಕುಡಿಯುವ ನೀರಿಗೆ ಹಪಹಪಿಕೆಯೊಂದಿಗೆ, ಕೃಷಿ ಕೈಕೊಡುವ ಭೀತಿ ಎದುರಾಗುತ್ತದೆ.

ರೈತ ಕಂಗಾಲು: ಮುಂಗಾರು ಪೂರ್ವ ಮಳೆ ಕೈಕೊಟ್ಟರೆ ಪರದಾಡುವವರು ಜಿಲ್ಲೆಯ ಅಳಿದುಳಿದ ರೈತರು. ಮೇ ತಿಂಗಳೊಳಗೆ ಸಾಕಷ್ಟು ಮಳೆ ಬಿದ್ದು ಗದ್ದೆಗಳಲ್ಲಿ ನೀರು ನಿಂತು, ಗದ್ದೆಯನ್ನು ಉತ್ತು, ಬಿತ್ತಿ ನೇಜಿ ಸಿದ್ಧತೆಯಲ್ಲಿ ನಿರತರಾಗಬೇಕಿದ್ದ ರೈತರು ಇಂದು ಆಕಾಶ ದಿಟ್ಟಿಸುವಂತಾಗಿದೆ. ಇದರಿಂದ ಏಣೇಲು ಬೆಳೆ ಬೆಳೆಯುವ ರೈತ ಇನ್ನೂ ಗದ್ದೆ ಇಳಿದು ಅದನ್ನು ಹಸನು ಗೊಳಿಸಿಲ್ಲ. ಮಳೆಯಿಂದ ಗದ್ದೆಯಲ್ಲಿ ನೀರೇ ನಿಲ್ಲದ್ದರಿಂದ ನೇಜಿ ತಯಾರಿ ಯನ್ನೇ ಆತ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಗದ್ದೆಯನ್ನು ಹದ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿಲ್ಲ.

ಎಲ್ಲವೂ ಸರಿಯಾದ ರೀತಿಯಲ್ಲಿ ನಡೆದಿದ್ದರೆ ಜೂನ್ ಎರಡನೇ ವಾರದೊಳಗೆ ನೇಜಿ ನಾಟಿ ಕಾರ್ಯ ಪ್ರಾರಂಭಗೊಳ್ಳ ಬೇಕಾಗಿತ್ತು. ಜುಲೈ ತಿಂಗಳ ಒಳಗೆ ನಾಟಿ ಮುಗಿದು ಸೆಪ್ಟಂಬರ್-ಅಕ್ಟೋಬರ್ ವೇಳೆಗೆ ಬೆಳೆ ಆತನ ಕೈಗೆ ದಕ್ಕು ತ್ತಿತ್ತು. ಇದೀಗ ಮುಂಗಾರು ಪೂರ್ವ ಮಳೆಯ ಕೊರತೆ ಹಾಗೂ ಮುಂಗಾರು ಪ್ರವೇಶದ ಅನಿಶ್ಚಿತತೆ ಆತನ ನಿಟ್ಟುಸಿರನ್ನು ಹೆಚ್ಚಿಸಿದೆ.

ಯಂತ್ರಧಾರೆಯ ಕತೆ-ವ್ಯಥೆ: ಇನ್ನೊಂದೆಡೆ ಲಾಭದಾಯಕ ಕೃಷಿಗಾಗಿ ಯಾಂತ್ರೀಕರಣವನ್ನು ಪ್ರತಿಪಾದಿಸುವ ಸರಕಾರ ರೈತರಿಗೆ ಸುಲಭದರದಲ್ಲಿ ಭತ್ತದ ಕೃಷಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಸುಲಭದ ದರದಲ್ಲಿ ನೀಡುವ ಯಂತ್ರಧಾರೆ ಯೋಜನೆ ಸಂಪೂರ್ಣ ಅವ್ಯವಸ್ಥೆಯ ಗೂಡಾಗಿದೆ. ಈ ಬಗ್ಗೆ ಯಾವುದೇ ಮಾಹಿತಿ ರೈತರಿಗೆ ಸಿಗುತ್ತಿಲ್ಲ. ಇದರಿಂದ ರೈತ ನೇಜಿಯಿಂದ ಹಿಡಿದು ನಾಟಿಯವರೆಗೆ ಬಳಸುವ ಯಂತ್ರೋಪಕರಣಗಳ ಬದಲು ಸಾಂಪ್ರದಾಯಿಕ ನೇಜಿ ನೆಡುವ ಪ್ರಕ್ರಿಯೆಗೆ ಮುಂದಾಗುವ ಪರಿಸ್ಥಿತಿ ಈಗ ಉದ್ಭವವಾಗಿದೆ. ಇದಕ್ಕೆ ಬೇಕಾದ ಕೃಷಿ ಕೂಲಿಕಾರನ್ನು ಎಲ್ಲಿಂದ ತರಲಿ ಎಂದು ರೈತರು ಗೋಳು ತೊಡಿಕೊಳ್ಳುತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X