‘ಇನ್‌ಕ್ರಿಡಿಯಾ -24’ ಸ್ಪರ್ಧೆ: ಬಂಟಕಲ್ ಕಾಲೇಜು ರನ್ನರ್ಸ್

ಉಡುಪಿ, ಫೆ.29: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ(ಎಂ.ಎ.ಎಂ.ಐ.ಟಿ)ದಲ್ಲಿ ಇತ್ತೀಚೆಗೆ ನಡೆದ ‘ಇನ್‌ಕ್ರಿಡಿಯಾ -24‘ರಲ್ಲಿ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ಒಟ್ಟು 60 ವಿದ್ಯಾರ್ಥಿಗಳು ರನ್ನರ್ ಆಫ್ ಟ್ರೋಪಿ ಹಾಗೂ 20,000ರೂ. ನಗದು ಬಹುಮಾನವನ್ನು ಗೆದ್ದುಕೊಂಡಿದ್ದಾರೆ.
ವಿವಿಧ ಸ್ಪರ್ಧೆಗಳಾದ ಕೋಡ್ 45, ವೆಬೆಡ್, ಮೂವಿಡಿಯಾ-ಫೋಟೋ ಗ್ರಫಿ ಮತ್ತು ಲೈನ್ ಫಾಲೋವರ್ ಸ್ಫರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿದರೆ, ಶೆರ್ಲಾಕ್ಡ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಮೆಮೆ ವಾರ್ಸ್ ಸ್ಫರ್ಧೆಯಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸಿದೆ.
Next Story





