ಉಡುಪಿ: ಆ.24ರಂದು ರಕ್ತದಾನ ಶಿಬಿರ

ಉಡುಪಿ, ಆ.22: ಉಡುಪಿ ಬ್ರಹ್ಮಕುಮಾರೀಸ್ ಇವರಿಂದ ಮೊದಲ ಬಾರಿಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲೆ ಮತ್ತು ಕುಂದಾಪುರ ತಾಲೂಕು ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬ್ರಹ್ಮಗಿರಿಯಲ್ಲಿರುವ ರೆಡ್‌ಕ್ರಾಸ್ ಭವನದಲ್ಲಿ ಆ.24ರ ರವಿವಾರ ಬೆಳಿಗ್ಗೆ 9 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ರಾಜಯೋಗಿನಿ ದಾದಿ ಪ್ರಕಾಶಮಣಿಜೀ ಇವರ ಸ್ಮರಣಾರ್ಥ ವಿಶ್ವ ಬಂಧುತ್ವ ದಿನದ ಅಂಗವಾಗಿ ಈ ಬೃಹತ್ ರಕ್ತದಾನ ಅಭಿಯಾನವನ್ನು ದೇಶದಾದ್ಯಂತ ನಡೆಸಲಾಗುತ್ತಿದೆ. ಕುಂದಾಪುರ ರೆಡ್‌ಕ್ರಾಸ್ ಸಭಾಪತಿ ಎಸ್. ಜಯಕರ ಶೆಟ್ಟಿ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಬ್ರಹ್ಮ ಕುಮಾರೀಸ್ ಉಡುಪಿ ಸಂಚಾಲಕಿ ಬಿ. ಕೆ ಸುಮಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಬ್ರಹ್ಮಕುಮಾರೀಸ್ ಉಡುಪಿ ಮತ್ತು ರೆಡ್‌ಕ್ರಾಸ್ ಪ್ರಕಟನೆ ತಿಳಿಸಿದೆ.
Next Story





