ಉಡುಪಿ: ಜೂ.24-25ರಂದು ಕೆಲವು ಅಂಚೆ ಕಚೇರಿಗಳ ವ್ಯವಹಾರ ಸ್ಥಗಿತ

ಉಡುಪಿ, ಜೂ.22: ಅಂಚೆ ಇಲಾಖೆಯಲ್ಲಿ ಐ.ಟಿ.2.0(ಎ.ಪಿ.ಟಿ 2.0) ಅಡಿಯಲ್ಲಿ ಹೊಸ ತಂತ್ರಾಅಶ ಅಳವಡಿಸುವ ಹಿನ್ನೆಲೆಯಲ್ಲಿ ಜೂ.24 ಮತ್ತು 25ರಂದು ಕೆಲವು ಅಂಚೆ ಕಚೇರಿಗಳಲ್ಲಿ ವ್ಯವಹಾರ ಸ್ಥಗಿತಗೊಳಿಸಲಾಗಿದೆ.
ಕುಂದಾಪುರ ಪ್ರಧಾನ ಅಂಚೆ ಕಚೇರಿ, ಮಣಿಪಾಲ ಪ್ರಧಾನ ಅಂಚೆ ಕಚೇರಿ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಉಪ/ ಶಾಖಾ ಅಂಚೆ ಕಚೇರಿಗಳಲ್ಲಿ ಯಾವುದೇ ವ್ಯವಹಾರಗಳು ಇರುವುದಿಲ್ಲ. ಉಡುಪಿ ಪ್ರಧಾನ ಅಂಚೆ ಕಚೇರಿ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಉಪ/ ಶಾಖಾ ಅಂಚೆ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ
Next Story





