ಪಾಂಬೂರು: ಫೆ.25ಕ್ಕೆ ಶಿಕ್ಷಣ ತಜ್ಞ ಆರ್.ಎಸ್.ಬೆಳ್ಳೆ ಸಂಸ್ಮರಣೆ

ಶಿರ್ವ, ಫೆ.21: ಆರ್.ಎಸ್.ಬೆಳ್ಳೆ ಸಂಸ್ಮರಣ ಸಮಿತಿ ಪಾಂಬೂರು ಇದರ ವತಿಯಿಂದ ಹಿರಿಯ ಶಿಕ್ಷಣ ತಜ್ಞ, ಸಮಾಜ ಸೇವಕ ಹಾಗೂ ಪಡುಬೆಳ್ಳೆ ಶ್ರೀನಾರಾಯಣಗುರು ಪ್ರೌಢ ಶಾಲೆಯ ಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಆರ್.ಎಸ್. ಬೆಳ್ಳೆ ಇವರ ಸಂಸ್ಮರಣೆಯಲ್ಲಿ ಹೊನಲು ಬೆಳಕಿನ ಮಿತ್ರಗೋಷ್ಠಿ ಫೆ.27ರ ಸಂಜೆ 7 ಗಂಟೆಗೆ ಪಾಂಬೂರಿನ ಕೊಂಕಣಗುರಿ ಮನೆಯಂಗಳದಲ್ಲಿ ನಡೆಯಲಿದೆ.
ಕವಿ, ಸಾಹಿತಿ ಆರ್.ಡಿ. ಪಾಂಬೂರು ಸಂಸ್ಮರಣಾ ಭಾಷಣ ಮಾಡಲಿದ್ದು, ಅಧ್ಯಕ್ಷತೆಯನ್ನು ಬೆಳ್ಳೆ ಗ್ರಾಪಂನ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಟ್ಟಿಂಗೇರಿ ಶ್ರೀಬ್ರಹ್ಮಲಿಂಗೇಶ್ವರ ದೇವಳದ ಧರ್ಮದರ್ಶಿಗಳಾದ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಶಿರ್ವ ಹಿಂದೂ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಬೆಳ್ಳೆ ವಾಸು ಆಚಾರ್, ಸ್ಯಾಮ್‌ಸನ್ ನೊರೋನ್ಹಾ ಪಾಂಬೂರು, ಗಣೇಶ್ ತಂತ್ರಿ ಪಡು ಬೆಳ್ಳೆ, ಪರಿಚಯ ಪ್ರತಿಷ್ಠಾನ ಪಾಂಬೂರು ಇದರ ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ಪಾಂಬೂರು, ನಿಸಾರ್ ಅಹಮ್ಮದ್ ಉಡುಪಿ ಭಾಗವಹಿಸುವರು.
ಈ ಸಂದರ್ಭದಲ್ಲಿ ಉಡುಪಿಯ ಹಿರಿಯ ನ್ಯಾಯವಾದಿಗಳಾದ ಜಯಶಂಕರ ಕುತ್ಪಾಡಿ ಇವರನ್ನು ಸನ್ಮಾನಿಸಲಾಗುವುದು ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.





