ಉಚ್ಚಿಲದಲ್ಲಿ ರಕ್ತದಾನ ಶಿಬಿರ: 257 ಯುನಿಟ್ ರಕ್ತ ಸಂಗ್ರಹ

ಕಾಪು, ಅ.4: ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ, ಜಿಲ್ಲಾ ಮೊಗವೀರ ಯುವ ಸಂಘಟನೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ನೇತೃತ್ವದಲ್ಲಿ ದ.ಕ. ಮೊಗವೀರ ಮಹಿಳಾ ಸಂಘ ಉಚ್ಚಿಲ, ಕಾಪು ನಾಲ್ಕುಪಟ್ನ ಮೊಗವೀರ ಸಭಾ ಉಚ್ಚಿಲ, ಕಾಪು ನಾಲ್ಕುಪಟ್ನ ಮೊಗವೀರ ಮಹಿಳಾ ಒಕ್ಕೂಟ ಉಚ್ಚಿಲ, ಕರಾವಳಿ ಯುವಕ-ಯುವತಿ ವೃಂದ ಹೆಜಮಾಡಿ, ಕರಾವಳಿ ಫ್ರೆಂಡ್ಸ್ ಉಚ್ಚಿಲ, ಟೀಂ ಮಾರುತಿ ಮೂಳೂರು, ರಕ್ತನಿಧಿ ಕೆ.ಎಂ.ಸಿ. ಮಣಿಪಾಲ, ರಕ್ತನಿಧಿ ಜಿಲ್ಲಾಸ್ಪತ್ರೆ ಉಡುಪಿ ಜಿಲ್ಲೆ, ಜಿಲ್ಲಾಡಳಿತ ಸಹಯೋಗದಲ್ಲಿ ಜಿ.ಶಂಕರ್ ಅವರ ಜನ್ಮದಿನದ ಪ್ರಯುಕ್ತ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವು ರವಿವಾರ ಉಚ್ಚಿಲ ಶ್ರೀಮಹಾಲಕ್ಷ್ಮೀ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ.ಶಂಕರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ವಹಿಸಿದ್ದರು.
ಬಗ್ವಾಡಿ ಹೋಬಳಿಯ ಅಧ್ಯಕ್ಷ ಉದಯ್ ಕುಮಾರ್ ಹಟ್ಟಿಯಂಗಡಿ, ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಅಮೀನ್ ಬಾರ್ಕೂರು, ಮೊಗವೀರ ಯುವ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ರವೀಶ್ ಎಸ್. ಕೊರವಡಿ, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಗೌರವ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಮಲ್ಪೆ, ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಜಯಂತ್ ಅಮೀನ್ ಕೋಡಿ, ಬಗ್ವಾಡಿ ಹೋಬಳಿಯ ಅಧ್ಯಕ್ಷ ಉದಯ್ ಕುಮಾರ್ ಹಟ್ಟಿಯಂಗಡಿ, ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಅಮೀನ್ ಬಾರ್ಕೂರು, ದ.ಕ. ಮೊಗವೀರ ಮಹಾಜನ ಮಹಿಳಾ ಸಂಘದ ಅಧ್ಯಕ್ಷೆ ಕವಿತಾ ಶರತ್, ಕಾಪು ನಾಲ್ಕುಪಟ್ನ ಮೊಗವೀರ ಸಭಾದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಗುಣಾ ಎಸ್.ಕರ್ಕೇರ, ಕರಾವಳಿ ಯುವಕ- ಯುವತಿ ವೃಂದದ ಅಧ್ಯಕ್ಷ ಎಸ್.ದಿವಾಕರ ಹೆಜಮಾಡಿ, ಹೆಜಮಾಡಿ ಕರಾವಳಿ ಯುವತಿ ವೃಂದದ ಅಧ್ಯಕ್ಷೆ ರೂಪಾ ಹೇಮಾನಂದ್ ಪುತ್ರನ್, ಕರಾವಳಿ ಫ್ರೆಂಡ್ಸ್ ಉಚ್ಚಿಲ ಅಧ್ಯಕ್ಷ ರಿತೇಶ್ ಸುವರ್ಣ, ಟೀಂ ಮಾರುತಿ ಮೂಳೂರು ಅಧ್ಯಕ್ಷ ಪ್ರಹಾರ್ ಮೂಳೂರು, ರಕ್ತನಿಧಿ ಜಿಲ್ಲಾಸ್ಪತ್ರೆ ವೈದ್ಯಕೀಯ ನಿರ್ದೇಶಕಿ ಡಾ.ವೀಣಾ ಕುಮಾರಿ ಉಪಸ್ಥಿತರಿದ್ದರು.
ಮೊಗವೀರ ಯುವ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ರವೀಶ್ ಎಸ್. ಕೊರವಡಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ದ.ಕ.ಮೊಗವೀರ ಮಹಾಜನ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ಸ್ವಾಗತಿಸಿ ದರು. ಮೊಗವೀರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶೇಖರ್ ತೋಳಾರ್ ವಂದಿಸಿದರು. ಶಿಕ್ಷಕ ಅಶೋಕ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ರಕ್ತದಾನ ಶಿಬಿರದಿಂದ ಒಟ್ಟು 257 ಯುನಿಟ್ ರಕ್ತ ಸಂಗ್ರಹ ಮಾಡಲಾಗಿದೆ.






