ಮೇ 26ರಿಂದ ಎಸೆಸೆಲ್ಸಿ-2: ಶುಲ್ಕದಲ್ಲಿ ವಿನಾಯಿತಿ

ಉಡುಪಿ, ಮೇ 8: 2025ರ ಎಸೆಸೆಲ್ಸಿ ಪರೀಕ್ಷೆ-1 ರಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಮೇ 26ರಿಂದ ಜೂನ್ 2ರವರೆಗೆ ಪರೀಕ್ಷೆ-2 ಅನ್ನು ನಡೆಸಲಾಗುತ್ತಿದ್ದು, ಈ ಪರೀಕ್ಷೆಗೆ ನೋಂದಾವಣೆಯಾಗುವ ವಿದ್ಯಾರ್ಥಿ ಗಳಿಗೆ ಪ್ರಪ್ರಥಮ ಬಾರಿಗೆ ಶುಲ್ಕ ವಿನಾಯಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ನೀಡಲಾಗುತ್ತಿದೆ.
ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಮೇ 10 ಕೊನೆಯ ದಿನವಾಗಿದ್ದು, 2025ರಲ್ಲಿ ದೀರ್ಘ ಗೈರು ಹಾಜರಾಗಿ ಎಸೆಸೆಲ್ಸಿ ಪರೀಕ್ಷೆ -1ಕ್ಕೆ ಗೈರು ಹಾಜರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಖಾಸಗಿ ವಿದ್ಯಾರ್ಥಿ ಗಳಾಗಿ ಪರೀಕ್ಷೆ-2 ಕ್ಕೆ ಬರೆಯಲು ಅವಕಾಶವಿರುತ್ತದೆ.
ಎಸೆಸೆಲ್ಸಿ ಪರೀಕ್ಷೆ-1ರಲ್ಲಿ ಉತ್ತೀರ್ಣರಾಗದ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೆ ಶುಲ್ಕ ವಿನಾಯಿತಿ ನೀಡಿರುವ ಸಂಬಂಧ ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (ಆಡಳಿತ) ಪ್ರಕಟಣೆ ತಿಳಿಸಿದೆ.
Next Story





