ಟ್ರೆಡಿಂಗ್ ಆ್ಯಪ್ : 2.71 ಲಕ್ಷ ರೂ. ಆನ್‌ಲೈನ್ ವಂಚನೆ

ಬೈಂದೂರು, ಜು.31: ಟ್ರೆಡಿಂಗ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಮೇಶ ಎಂವರಿಗೆ ಮೇ 6ರಂದು ಕರೆ ಮಾಡಿದ ಅಪರಿಚಿತರು ಟ್ರೇಡಿಂಗ್ ಆ್ಯಪ್‌ಗೆ ಹಣ ಹಾಕಿದ್ದಲ್ಲಿ ಉತ್ತಮ ಲಾಭಾಂಶ ನೀಡುವುದಾಗಿ ನಂಬಿಸಿದರು. ಅದರಂತೆ ಅವರು 2,71,771ರೂ. ಹಣ ಹೂಡಿಕೆ ಮಾಡಿದ್ದರು. ಆದರೆ ವಂಚಕರು ಹಣ ವಾಪಾಸ್ಸು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.
Next Story





