ಪ್ಲಾಟ್ಫಾರಂ ವಿಸ್ತರಣೆ| ಫೆ.28ರವರೆಗೆ ಮಂಗಳೂರು - ಮುಂಬೈ ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ವ್ಯತ್ಯಯ

ಸಾಂದರ್ಭಿಕ ಚಿತ್ರ
ಉಡುಪಿ, ಫೆ.7: ಮುಂಬೈಯ ಸಿಎಸ್ಎಂಟಿಯ ಪ್ಲಾಟ್ಫಾರಂ ನಂ.12 ಮತ್ತು 13ರ ವಿಸ್ತರಣಾ ಕಾರ್ಯ ನಡೆಯುತ್ತಿರುವುದರಿಂದ ಮಂಗಳೂರು ಜಂಕ್ಷನ್ ಹಾಗೂ ಮುಂಬೈ ಸಿಎಸ್ಎಂಟಿ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಫೆ.28ರವರೆಗೆ ಥಾಣೆಯಲ್ಲೇ ಕೊನೆಗೊಳಿಸಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಅದೇ ರೀತಿ ಮಡಗಾಂವ್ ಜಂಕ್ಷನ್- ಮುಂಬೈ ಸಿಎಸ್ಎಂಟಿ ತೇಜಸ್ ಎಕ್ಸ್ಪ್ರೆಸ್ ಹಾಗೂ ಜನಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಸಹ ಫೆ.28ರವರೆಗೆ ದಾದರ್ ಸ್ಟೇಶನ್ನಲ್ಲೇ ಕೊನೆಗೊಳಿಸಲಾಗುವುದು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





