ಸಾಫ್ಟ್‌ವೇರ್ ಇಂಜಿನಿಯರ್‌ಗೆ 28 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಕೋಟ, ಜೂ.17: ಆನ್‌ಲೈನ್ ಟಾಸ್ಕ್ ನೀಡಿ ದುಪ್ಪಟ್ಟು ಹಣ ನೀಡುವುದಾಗಿ ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಶಿರಿಯಾರ ಗ್ರಾಮದ ಶಶಿಧರ್(31) ಎಂಬವರಿಗೆ ಮೇ 29ರಂದು ಗೂಗಲ್‌ನಲ್ಲಿ ರಿಸ್ಯೂಂ ಕೊಡುವ ಬಗ್ಗೆ ಸಂದೇಶವೊಂದು ಬಂದಿದ್ದು, ಅದರ ಲಿಂಕ್ ಓಪನ್ ಮಾಡಿದಾಗ ಟೆಲಿಗ್ರಾಂ ಆಪ್ಲೇಕೇಶನ್‌ನಲ್ಲಿ ಓರ್ವ ಸಂಪರ್ಕಿಸಿ, ಟಾಸ್ಕ್ ನೀಡುವ ಬಗ್ಗೆ ಸೂಚನೆಯನ್ನು ನೀಡಿದ್ದನು. ಮೊದಲಿಗೆ ಟಾಸ್ಕ್ ಸಂಪೂರ್ಣ ಮಾಡಿದ ಬಗ್ಗೆ ಹಣ ಮರುಪಾವತಿಗೊಂಡಿದ್ದು, ಆ ಬಳಿಕ ಆರೋಪಿಗಳು ಟಾಸ್ಕ್ ನಡೆಸುವಂತೆ ಮತ್ತು ಹಣ ಪಾವತಿಸುವಂತೆ ಹಲವಾರು ಬ್ಯಾಂಕ್ ಖಾತೆಗಳನ್ನು ನೀಡಿದ್ದರು.
ಅದರಂತೆ ಶಶಿಧರ್ ಆರೋಪಿಗಳು ಸೂಚಿಸಿರುವ ಖಾತೆಗೆ ಹಂತ ಹಂತವಾಗಿ ಮೇ 30ರಿಂದ ಜೂ.12ರವರೆಗೆ ಒಟ್ಟು 28,01,095ರೂ. ಪಾವತಿಸಿದ್ದರು. ಆದರೆ ಆರೋಪಿಗಳು ದುಪ್ಪಟ್ಟು ಹಣ ನೀಡದೆ ವಂಚಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story





