ಅಕ್ಕ ಕೆಫೆ ನಿರ್ವಹಣೆ: ಜು.28ಕ್ಕೆ ಸಂಜೀವಿನಿ ಸ್ವ-ಸಹಾಯ ಗುಂಪುಗಳಿಗೆ ನೇರ ಸಂದರ್ಶನ

ಉಡುಪಿ, ಜು.23:ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ - ಸಂಜೀವಿನಿ ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ನೂತನವಾಗಿ ‘ಅಕ್ಕ ಕೆಫೆ’ ಪ್ರಾರಂಭಿಸಲು ಉದ್ದೇಶಿಸಿದ್ದು, ಕೆಫೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಸಲುವಾಗಿ ಅರ್ಹ ಸ್ವ-ಸಹಾಯ ಗುಂಪುಗಳನ್ನು ಆಯ್ಕೆ ಮಾಡಲು ಜುಲೈ 28ರಂದು ಬೆಳಗ್ಗೆ 10:30ಕ್ಕೆ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಕಡ್ಡಾಯವಾಗಿ ಗ್ರಾಮೀಣ ಸಂಜೀವಿನಿ ಸ್ವ-ಸಹಾಯ ಗುಂಪುಗಳಾಗಿರುವ, ಹೋಟೆಲ್ ಅಥವಾ ಕ್ಯಾಟರಿಂಗ್ ಉದ್ಯಮ ದಲ್ಲಿ ಪೂರ್ವಾನ್ವಯ ಅನುಭವ ಹೊಂದಿರುವ ಸ್ಥಳೀಯ ಸ್ವ-ಸಹಾಯ ಗುಂಪುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸ್ವ-ಸಹಾಯ ಗುಂಪುಗಳು ತಾವು ತಯಾರಿಸುವ ಆಹಾರದ ಒಂದು ಮಾದರಿ ಮೆನು ಮತ್ತು ದರದ ಪಟ್ಟಿಯೊಂದಿಗೆ ಹಾಗೂ ತಮ್ಮ ಸಂಘದ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಅವಿನಾಶ್, ಜಿಲ್ಲಾ ವ್ಯವಸ್ಥಾಪಕರು, ಜಿಲ್ಲಾ ಪಂಚಾಯತ್ ಉಡುಪಿ (ಸಂಜೀವಿನಿ ಯೋಜನೆ) ದೂರವಾಣಿ ಸಂಖ್ಯೆ: 9844234080 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.




