ಡಿ. 3ರಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉಡುಪಿ, ಮಂಗಳೂರಿಗೆ ಭೇಟಿ

ಉಡುಪಿ, ಡಿ.2:ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ರಾದ ಎಸ್.ಮಧು ಬಂಗಾರಪ್ಪ ಅವರು ರವಿವಾರ ಉಡುಪಿ ಜಿಲ್ಲೆಯ ಕಟಪಾಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಗೆ ಭೇಟಿ ನೀಡಲಿದ್ದಾರೆ.
ಮಂಗಳೂರಿನಿಂದ ಬೆಳಗ್ಗೆ 10ಗಂಟೆಗೆ ಕಟಪಾಡಿಯ ವಿಶ್ವನಾಥ ಕ್ಷೇತ್ರ ದೇವಸ್ಥಾನ ಸಭಾ ಭವನಕ್ಕೆ ಆಗಮಿಸುವ ಸಚಿವರು, ಡಿ.10ರಂದು ನಡೆಯಲಿ ರುವ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಮೃತ ಮಹೋತ್ಸವ ಹಾಗೂ ಸಮಾಜದ ಬೃಹತ್ ಜಾಗೃತಿ ಸಮಾವೇಶದ ಕುರಿತು ನಡೆಯುವ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸುವರು.
ಬಳಿಕ ಅಪರಾಹ್ನ 2:30ಕ್ಕೆ ಮೂಲ್ಕಿಯ ಬಿಲ್ಲವ ಮಹಾ ಮಂಡಳಿ ಸಭಾ ಭವನದಲ್ಲಿ ನಡೆಯುವ ಪೂರ್ವಭಾವಿ ಸಮಾ ಲೋಚನಾ ಸಭೆಯಲ್ಲಿ ಪಾಲ್ಗೊಳ್ಳುವರು. ಸಂಜೆ 4:30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.
Next Story





