ಪ್ರತಿ 3 ತಿಂಗಳಿಗೊಮ್ಮೆ ಪ್ರತ್ಯೇಕ ರೈತರ ಸಭೆ ಕರೆಯಲು ಆಗ್ರಹಿಸಿ ಉಡುಪಿ ಡಿಸಿಗೆ ಮನವಿ

ಉಡುಪಿ, ಜು.29: ಉಡುಪಿ ಜಿಲ್ಲೆಯ ರೈತರಿಗೆ ಸರಕಾರದಿಂದ ಸಿಗುವ ಸವಲತ್ತುಗಳು ಸರಿಯಾಗಿ ಸಿಗದೆ ಬೇರೆ ಜಿಲೆಗೆ ಹೋಗುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಹಿಂದಿನಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರತ್ಯೇಕ ರೈತರ ಸಭೆಯನ್ನು ಕರೆದು ರೈತರಿಗೆ ಸಂಬಂಧಪಟ್ಟ ಅರಣ್ಯ, ತೋಟಗಾರಿಕೆ, ಕೃಷಿ, ಪಶು ಸಂಗೋ ಪನಾ ಇಲಾಖೆಯ ಅಧಿಕಾರಿಗಳನ್ನು ಕರೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ಹಾಗೂ ಸರಕಾರಿ ಸವಲತ್ತು ಗಳನ್ನು ಪರಿಣಾಮಕಾರಿಯಾಗಿ ಸಿಗುವಂತೆ ಮಾಡಬೇಕೆಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಆಗ್ರಹಿಸಿದೆ.
ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಿರುವ ಕಿಸಾನ್ ಕಾಂಗ್ರೆಸ್ ನಿಯೋಗ, ಉಡುಪಿ ಜಿಲ್ಲೆಯಲ್ಲಿ ಮಳೆ ಗಾಳಿಯಿಂದ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳಿಗೆ ಹಾನಿಯಾ ಗಿದ್ದು, ಪ್ರಕೃತಿ ವಿಕೋಪಕ್ಕೆ ರೈತರಿಗೆ ಈಗಲೂ ಬ್ರಿಟಿಷ್ ಕಾಲದ ಪರಿಹಾರವೇ ನೀಡಲಾಗುತ್ತಿದೆ. ಆದ್ದರಿಂದ ತಾವು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ನಷ್ಟ ಉಂಟಾದ ರೈತರಿಗೆ ಈಗಿನ ಸರಕಾರಿ ಮಾನದಂಡದ ಪ್ರಕಾರವೇ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದೆ.
ಜಿಲ್ಲೆಯಲ್ಲಿ ನೋಂದಾಣಿಯಾದ ಜಿಲ್ಲಾ ರೈತ ಸಂಘವು ಕಾರ್ಯಾ ಚರಿಸುತ್ತಿದ್ದು ರೈತರ ಎಲ್ಲಾ ಸಮಸ್ಯೆ ಗಳಿಗೆ ಸ್ಪಂದಿಸಿ ಸರಕಾರದ ಗಮನ ಸೆಳೆಯುವ ಕಾರ್ಯವನ್ನು ಮಾಡುತ್ತಿದೆ. ಆದ್ದರಿಂದ ತಾವು ಜಿಲ್ಲೆಯಲ್ಲಿ ರೈತರಿಗೆ ಸಂಬಂಧಪಟ್ಟ ಯಾವುದೇ ಸರಕಾರಿ ಮಟ್ಟದ ನಿರ್ಧಾರವನ್ನು ತೆಗೆದುಕೊಳ್ಳುವಾಗ ಸಂಘದ ಅಧ್ಯಕ್ಷ, ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಗಮನಕ್ಕೆ ತಂದು ಮುಂದುವರಿಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಶೆಟ್ಟಿ, ಉಪಾಧ್ಯಕ್ಷ ಶೇಖರ್ ಕೋಟ್ಯಾನ್ ಉದ್ಯಾವರ, ರಾಜ್ಯ ಕಾರ್ಯದರ್ಶಿ ರಾಯ್ಬ್ ಮಾರ್ವಿನ್ ಫೆರ್ನಾಂಡೀಸ್ ಹಾಗೂ ಅಬ್ದುಲ್ ಹಮೀದ್ ಉದ್ಯಾವರ, ಶ್ರೀಶ ಉಪಾಧ್ಯಾಯ ಕಡಿಯಾಳಿ ಉಪಸ್ಥಿತರಿದ್ದರು.







