‘ಪೊಲ್ಯ ಪ್ರೀಮಿಯರ್ ಲೀಗ್-3’: ಪೊಲ್ಯ ಥಂಡರ್ಸ್‌ಗೆ ಪ್ರಶಸ್ತಿ

ಕಾಪು, ಮೇ13: ಉಚ್ಚಿಲ ಪೊಲ್ಯ ಮೈದಾನದಲ್ಲಿ ರವಿವಾರ ನಡೆದ ’ಪೊಲ್ಯ ಪ್ರೀಮಿಯರ್ ಲೀಗ್ 2026 ಸೀಸನ್ 3’ ಕ್ರಿಕೆಟ್ ಪಂದ್ಯಾಟದಲ್ಲಿ ಮಜೀದ್ ನೇತೃತ್ವದ ’ಪೊಲ್ಯ ಥಂಡರ್ಸ್’ ತಂಡವು ಚಾಂಪಿಯನ್ ಆಗಿ ಮೂಡಿಬಂದಿದೆ.
ಫೈನಲ್ ಪಂದ್ಯದಲ್ಲಿ ರಫೀಕ್ ಪಯ್ಯಾರ್ ನೇತೃತ್ವದ ’ಪೊಲ್ಯ ಸ್ಟ್ರೈಕರ್ಸ್’ನ್ನು ಮಣಿಸುವ ಮೂಲಕ ’ಪೊಲ್ಯ ಥಂಡರ್ಸ್’ ತಂಡವು ಪ್ರಶಸ್ತಿ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಆಟಗಾರನಾಗಿ ’ಪೊಲ್ಯ ಥಂಡರ್ಸ್’ ತಂಡದ ಸಾಹಿಲ್, ಉತ್ತಮ ಬ್ಯಾಟ್ಸ್‌ಮೆನ್ ಆಗಿ ’ಪೊಲ್ಯ ಸ್ಟ್ರೈಕರ್ಸ್’ ತಂಡದ ಸೈಫುಲ್ಲಾ, ಉತ್ತಮ ಬೌಲರ್ ಆಗಿ ’ಪೊಲ್ಯ ಸ್ಟ್ರೈಕರ್ಸ್’ ತಂಡದ ರಫೀಕ್ ಪಯ್ಯಾರ್ ಹಾಗು ಸರಣಿಶ್ರೇಷ್ಠ ಆಟಗಾರನಾಗಿ ’ಪೊಲ್ಯ ಥಂಡರ್ಸ್’ ತಂಡದ ಸುಹೈಲ್ ಪ್ರಶಸ್ತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸ ಲಾಯಿತು. ಮುಖ್ಯ ಅತಿಥಿಗಳಾಗಿ ಎಸ್‌ಡಿಪಿಐ ಮುಖಂಡರಾದ ರಝಾಕ್ ವೈ.ಎಸ್., ಹನೀಫ್ ಮುಳೂರು, ಗ್ರಾಪಂ ಸದಸ್ಯ ರಝಾಕ್ ಬಗ್ಗತೋಟ, ಪ್ರಮುಖರಾದ ಶೇಕ್ ಮಯ್ಯದ್ದಿ, ಇಕ್ಬಾಲ್ ಪರ್ಯ್ಯಾಸೌದಿ, ಬದ್ರುದ್ದೀನ್ ಪೊಲ್ಯ, ನಿಝಾಮ್ ಪೊಲ್ಯ, ವಸಂತ ದೇವಾಡಿಗ, ಸಾದಿಕ್ ಪೊಲ್ಯ, ಎಂ.ಬಷೀರ್ ಪೊಲ್ಯ, ಆರಿಫ್ ಖಾಸಿಂ, ಮೊಹಮ್ಮದ್ ಫಾರೂಕ್, ಅಬೂಬಕ್ಕರ್ ಗುರುಪುರ, ಆಲಿಯಬ್ಬ ಪೊಲ್ಯ, ಜಯ ಶೆಟ್ಟಿ, ಮಲ್ಲಿಕಾ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು. ನಿಸಾರ್ ಪೊಲ್ಯ ಕಾರ್ಯಕ್ರಮ ನಿರೂಪಿಸಿದರು.






