ಸಿಗಡಿ ಸಾಕಾಣಿಕೆಗೆ 3 ಕೋಟಿ ರೂ. ಸಾಲ ಪಡೆದು ವಂಚನೆ ಆರೋಪ; ಪ್ರಕರಣ ದಾಖಲು

ಪಡುಬಿದ್ರಿ, ಸೆ.24: ಕರ್ನಾಟಕ ಬ್ಯಾಂಕಿನಿಂದ ಸಿಗಡಿ ಸಾಕಾಣಿಕೆ ಘಟಕ ಸ್ಥಾಪನೆಗಾಗಿ ಒಟ್ಟು 3ಕೋಟಿ ರೂ. ಸಾಲ ಪಡೆದು ವಂಚಿಸಿರುವ ಬಗ್ಗೆ ವರದಿಯಾಗಿದೆ.
ಲಲಿತಾ ಅಕ್ವಾ ಫಾರ್ಮ್ ಎಂಬ ಸಂಸ್ಥೆಯ ಮಾಲಕ ಶ್ಯಾಮ್ ಪ್ರಸಾದ್ ಎಸ್., ಅವರ ಪತ್ನಿ ಶೈಲಜಾ, ಸಹೋದರ ನಂದ ಪ್ರಸಾದ್ ಶಿವಪ್ರಸಾದ್ ಸೇರಿಕೊಂಡು ಸಂಚು ರೂಪಿಸಿ ಪಡುಬಿದ್ರೆ ಕರ್ನಾಟಕ ಬ್ಯಾಂಕಿನಿಂದ 2023ರ ಫೆ.6ರಂದು 1ಕೋಟಿ ರೂ. ಹಾಗೂ 2023ರ ಫೆ.10ರಂದು 2ಕೋಟಿ ರೂ. ಸಿಗಡಿ ಸಾಕಾಣಿಕೆ ಘಟಕ ಸ್ಥಾಪನೆ ಬಗ್ಗೆ ಸಾಲ ಪಡೆದುಕೊಂಡಿದ್ದರು.
ನಂತರ ಆರೋಪಿಗಳು ಪಡೆದ ಸಾಲದ ಹಣವನ್ನು ಸಿಗಡಿ ಸಾಕಾಣಿಕೆ ಘಟಕ ಸ್ಥಾಪನೆಗೆ ಉಪಯೋಗಿಸದೇ ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಆಭರಣ ಖರೀದಿ ಮಾಡಲು ಉಪಯೋಗಿಸಿ ಸಾಲವನ್ನು ಸರಿಯಾಗಿ ಮರುಪಾವತಿ ಮಾಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಶೆಟ್ಟಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




