ಉಡುಪಿ: ಮೇ 3, 4ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಉಡುಪಿ, ಮೇ 1: ಉಡುಪಿ ನಗರಸಭಾ ವ್ಯಾಪ್ತಿಯ ಕಲ್ಮಾಡಿ ಮತ್ತು ಕೊಡವೂರು ಪ್ರದೇಶಗಳಲ್ಲಿ ಮೇ 3 ಮತ್ತು 4 ರಂದು ವಾರಾಹಿ ಯೋಜನೆಯಿಂದ ಕೊಳವೆ ಲಿಂಕಿಂಗ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಮೇಲಿನ ಎರಡು ದಿನಗಳಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಕಲ್ಮಾಡಿ, ಕೊಡವೂರು ಮತ್ತು ಪಾಳೆಕಟ್ಟೆ ಓವರ್ ಹೆಡ್ ಟ್ಯಾಂಕ್ ಗೆ ಸಂಬಂಧಿಸಿದ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ವಾಗಲಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
Next Story





