ಉಡುಪಿ: ಜೂ. 30ಕ್ಕೆ ನಿರ್ದೇಶಕ ರಘುನಂದನರೊಂದಿಗೆ ಒಂದು ಸಂಜೆ
ಉಡುಪಿ, ಜೂ.24: ಉಡುಪಿಯ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು ಆಶ್ರಯದಲ್ಲಿ ‘ನಾನು ಸತ್ತ ಮೇಲೆ’ ಕವನ ಸಂಕಲನ ಮತ್ತು ‘ತುಯ್ತವೆಲ್ಲ ನವ್ಯದತ್ತ’-ಬೇಂದ್ರೆ ಕಾವ್ಯ ಮೀಮಾಂಸೆ ಪುಸ್ತಕಗಳ ಹಿನ್ನೆಲೆಯಲ್ಲಿ ಕೃತಿಗಳ ಲೇಖಕರಾದ ನಿರ್ದೇಶಕ ರಘುನಂದನ್ ಅವರೊಂದಿಗೆ ಒಂದು ಸಂಜೆ ಕಾರ್ಯಕ್ರಮವನ್ನು ಜೂ.30ರ ರವಿವಾರ ಸಂಜೆ 4:30ಕ್ಕೆ ಎಂ.ಜಿ.ಎಂ ಕಾಲೇಜಿನ ಆಡಿಯೋ ವಿಷುವಲ್ ಹಾಲಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಲೇಖಕರೊಡನೆ ಮಾತುಕತೆಯಲ್ಲಿ ಪ್ರೊ.ಮುರುಳೀಧರ ಉಪಾಧ್ಯ ಮತ್ತು ಪ್ರೊ.ಕೆ ಫಣಿರಾಜ್ ಭಾಗವಹಿ ಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮತ್ತು ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





