ಕಾಪಾಟಿನಲ್ಲಿರಿಸಿದ್ದ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು: ಪ್ರಕರಣ ದಾಖಲು

ಕೋಟ, ಜು.31: ಮನೆಯ ಕಾಪಾಟಿನಲ್ಲಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಳಹಳ್ಳಿ ಗ್ರಾಮದ ಮಾವಿನಕಟ್ಟೆಯ ಭಾರತಿ ಜೂ.1ರಂದು ಮದುವೆ ಕಾರ್ಯಕ್ರಮಕ್ಕೆ ಹೋಗಿ ವಾಪಾಸ್ಸು ಬಂದು ಚಿನ್ನಾಭರಣಗಳನ್ನು ಮನೆಯ ಗೋಡ್ರೇಜ್‌ನಲ್ಲಿ ಇಟ್ಟಿದ್ದರು. ಜು.27ರಂದು ಕಾಪಾಟು ತೆರೆದು ನೋಡಿದಾಗ ಕಳವಾಗಿ ರುವುದು ಕಂಡುಬಂದಿದೆ.
ಕಾಪಾಟಿನಲ್ಲಿದ್ದ 7 ಚಿನ್ನದ ಬಳೆ, 7 ಉಂಗುರಗಳು , 7ಕಿವಿ ಓಲೆ, ಒಂದು ಜೊತೆ ಜುಮಕಿ, 3 ಬ್ರಾಸ್‌ಲೈಟ್, ಕರಿಮಣಿ ಸರ, ನೆಕ್ಲೇಸ್, ಮುತ್ತಿನ ಸರ, ಕೆಂಪು ಹರಳಿನ ಸರ, 2 ಚಿನ್ನದ ಚೈನು ಸೇರಿದಂತೆ ಒಟ್ಟು 30ಲಕ್ಷ ರೂ. ಮೌಲ್ಯದ 320 ಗ್ರಾಂ ಚಿನ್ನಾಭರಣವನ್ನು ಭಾರತಿಯ ಗಂಡನ ಸ್ನೇಹಿತನಾದ ಚೇತನ್ ಶೆಟ್ಟಿ ಕಳವು ಮಾಡಿಕೊಂಡು ಹೋಗಿರು ವುದಾಗಿ ದೂರಲಾಗಿದೆ.
Next Story




