ಆ. 30ರಂದು ಮಂಜಣ್ಣನ ನೆನಪು-14 ಕಾರ್ಯಕ್ರಮ

ಉಡುಪಿ, ಆ.26: ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದ ಮತ್ತು ಉದ್ಯಾವರ ಗ್ರಾಮದ ಅಭಿವೃದ್ಧಿಯ ಹರಿಕಾರ ಮಂಜುನಾಥ ಉದ್ಯಾವರ 14ನೇ ಪುಣ್ಯತಿಥಿ ಮಂಜಣ್ಣನ ನೆನಪು -14 ಕಾರ್ಯ ಕ್ರಮ ಆ.30ರಂದು ಸಂಜೆ 5ಗಂಟೆಗೆ ಉದ್ಯಾವರ ಮೇಲ್ಪೇಟೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸುವರ್ಣ ಸಂಭ್ರಮ ಸಭಾಂಗಣದಲ್ಲಿ ಜರಗಲಿದೆ.
ಅಧ್ಯಕ್ಷತೆಯನ್ನು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ವಹಿಸಲಿರುವರು. ಕಲಾಭಿ ಥಿಯೇಟರ್-ಮಂಗಳೂರು ಇವರಿಂದ ವಿಲಿಯಂ ಷೇಕ್ಸ್ಪಿಯನರ್ ಮ್ಯಾಕ್ಬೆತ್‌ನ ರೂಪಾಂತರ ಮಾರಿ ಕಾಡ್ ತುಳು ಆಪ್ತರಂಗ ಪ್ರಯೋಗ ಜರಗಲಿದೆ.
ಅದೇ ರೀತಿ ಬೆಳಗ್ಗೆ 9.30ರಿಂದ ಮಧ್ಯಾಹ್ನ ಗಂಟೆ 1 ತನಕ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿದೆ. ಶಿಬಿರವನ್ನು ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಉದ್ಘಾಟಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story




