ಸಾರ್ವಜನಿಕರಿಗೆ 3,000 ಉಚಿತ ಔಷಧೀಯ ಸಸಿಗಳ ವಿತರಣೆ

ಮಣಿಪಾಲ: ಗುರುಪೂರ್ಣಿಮೆ ಹಾಗೂ ವನಮಹೋತ್ಸವದ ಅಂಗವಾಗಿ ಮಣಿಪಾಲದ ಮುನಿಯಾಲ್ ಆಯುರ್ವೇದ ಸಂಸ್ಥೆಯ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಔಷಧೀಯ ಸಸ್ಯಗಳ ಸಸಿಗಳ ವಿತರಣಾ ಕಾರ್ಯಕ್ರಮವನ್ನು ಬುಧವಾರ ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿರುವ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಸತ್ಯನಾರಾಯಣ ಬಿ. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಚಂದ್ರಕಾಂತ ಭಟ್, ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಸುಮಾರು 300 ಸಾರ್ವಜನಿಕರಿಗೆ ಬೇವು, ಅಶೋಕ, ಬಿರಿಂದ, ನೆಲ್ಲಿ (ಆಮ್ಲ), ನೇರಳೆ, ಹಿಪ್ಪುನೇರಳೆ, ಮಾವು, ಶ್ರೀಗಂಧ, ರಕ್ತಚಂದನ, ಪುನರ್ಪುಳಿ ಸೇರಿದಂತೆ ಒಟ್ಟು 3,000 ವಿವಿಧ ಔಷಧೀಯ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
Next Story




