ಉಡುಪಿ ಜಿಲ್ಲೆ| ದ್ವಿತೀಯ ಪಿಯುಸಿ ಪರೀಕ್ಷೆ: 32 ವಿದ್ಯಾರ್ಥಿಗಳು ಗೈರು

ಉಡುಪಿ, ಮಾ.4: ಉಡುಪಿ ಜಿಲ್ಲೆಯಲ್ಲಿ ಬುಧವಾರ ನಡೆದ ದ್ವಿತೀಯ ಪಿಯುಸಿಯ ಸಮಾಜ ವಿಜ್ಞಾನ ಹಾಗೂ ಸಂಖ್ಯಾ ಶಾಸ್ತ್ರ ಪರೀಕ್ಷೆಗೆ ಒಟ್ಟು 32 ಮಂದಿ ವಿದ್ಯಾರ್ಥಿ ಗೈರುಹಾಜರಾಗಿದ್ದರು. 3998 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೊಂದಾ ಯಿಸಿಕೊಂಡಿದ್ದು, ಇವರಲ್ಲಿ 3966 ಮಂದಿ ಇಂದು ಪರೀಕ್ಷೆ ಬರೆದಿದ್ದಾರೆ ಎಂದು ಡಿಡಿಪಿಯು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ನಡೆದ ಸಂಸ್ಕೃತ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದ 1725 ವಿದ್ಯಾರ್ಥಿಗಳಲ್ಲಿ 1724 ಮಂದಿ ಪರೀಕ್ಷೆ ಬರೆದು ಓರ್ವ ವಿದ್ಯಾರ್ಥಿ ಗೈರಾಗಿದ್ದಾರೆ.
Next Story





