ಹೂಡಿಕೆ ಹೆಸರಿನಲ್ಲಿ 32.68 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಕಾರ್ಕಳ, ಆ.11: ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಕೊಡುವುದಾಗಿ ಲಕ್ಷ್ಮಣ್ ಎಂಬವರಿಗೆ ಫೇಸ್‌ಬುಕ್‌ನಲ್ಲಿ ವಿಡಿಯೋ ಬಂದಿದ್ದು, ಅದನ್ನು ಕ್ಲಿಕ್ ಮಾಡಿದಾಗ ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆಗೊಂಡರು. ಅದರಲ್ಲಿ ಅಪರಿಚಿತರು ಹೆಚ್ಚಿನ ಲಾಭಾಂಶ ಮಾಡುವ ಷೇರು ಮತ್ತು ಐಪಿಓಗಳಲ್ಲಿ ಹೂಡಿಕೆ ಮಾಡಬೇಕಾಗಿ ತಿಳಿಸಿದ್ದು, ಅದರಂತೆ ಲಕ್ಷ್ಮಣ್ ಜು.7ರಿಂದ ಆ.4ರವರೆಗೆ ಹಂತ ಹಂತವಾಗಿ ಒಟ್ಟು 32,68,000ರೂ. ಹಣವನ್ನು ವರ್ಗಾಯಿಸಿದ್ದರು.
ಆದರೆ ಅಪರಿಚಿತ ವ್ಯಕ್ತಿಯು ಈತನಕ ಲಕ್ಷ್ಮಣ್ ಅವರಿಗೆ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೇ ನಂಬಿಸಿ, ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story




