ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಗೆ 34 ಕೋಟಿ ಬಿಡುಗಡೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಆ.29: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯ ಗ್ರಾಮಪಂಚಾಯತ್‌ಗಳ ಮೂಲಕ ಜಿಲ್ಲಾ ಮಟ್ಟಕ್ಕೆ ಒಟ್ಟು 19,854 ಅರ್ಜಿ ಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ಪೈಕಿ ರಾಜ್ಯ ಮಟ್ಟದಲ್ಲಿ 7909 ಅರ್ಜಿಗಳು ಪುರಸ್ಕೃತಗೊಂಡಿದೆ. ಪುರಸ್ಕೃತಗೊಂಡ ಅರ್ಜಿಗಳಲ್ಲಿ 6448 ಫಲಾನುಭವಿಗಳು ತರಬೇತಿಯನ್ನು ಪಡೆದು ಕೊಂಡಿದ್ದಾರೆ. ಇವರಲ್ಲಿ 3495 ಫಲಾನುಭವಿಗಳಿಗೆ ಒಟ್ಟು 34 ಕೋಟಿ ರೂ. ಸಹಾಯಧನ ಬಿಡುಗಡೆ ಯಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡುತಿದ್ದರು. ಸುಮಾರು 1,264 ಫಲಾನುಭವಿಗಳಿಗೆ ತರಬೇತಿ ಕಿಟ್ ವಿತರಣೆಯಾ ಗಿದ್ದು, ಇನ್ನು ಮುಂದಿನ ಹಂತದಲ್ಲಿ ತರಬೇತಿ ಪಡೆದ ಫಲಾನುಭವಿಗಳಿಗೆ ಅಂಚೆ ಕಚೇರಿಯ ಮೂಲಕ ತರಬೇತಿ ಕಿಟ್‌ಗಳನ್ನು ವಿತರಣೆ ಮಾಡಲಾಗುವುದು ಎಂದು ಅವರು ಸಭೆಗೆ ತಿಳಿಸಿದರು.
ಇನ್ನು ಮುಂದೆ ವಿಶ್ವಕರ್ಮ ಯೋಜನೆಯ ಕಿಟ್‌ಗಳನ್ನು ಸ್ಥಳೀಯ ಶಾಸಕರು ಮತ್ತು ದಿಶಾ ಸಮಿತಿಯ ಸದಸ್ಯರ ಸಮಕ್ಷಮ ಅಂಚೆ ಕಚೇರಿಯಲ್ಲಿ ವಿತರಿಸುವಂತೆ ಸಂಸದ ಕೋಟ ಅಧಿಕಾರಿಗಳಿಗೆ ಸಲಹೆ ನೀಡಿದರು.
2025-26ನೇ ಸಾಲಿನಲ್ಲಿ ಪಿ.ಎಂ.ಇ.ಜಿ.ಪಿ ಯೋಜನೆಯಡಿ 184 ಮಂದಿ ಅರ್ಜಿ ಸಲ್ಲಿಸಿದ್ದು, 6 ಕೋಟಿ ಸಹಾಯಧನ ಸಂಬಂಧಪಟ್ಟ ಬ್ಯಾಂಕುಗಳಿಗೆ ಮಂಜೂರಾಗಿದೆ. 2022ರಿಂದ ಇಲ್ಲಿಯವರೆಗೆ 578 ಮಂದಿ ಫಲಾನುಭವಿ ಗಳು ಅರ್ಜಿ ಸಲ್ಲಿಸಿದ್ದು, 373 ಮಂದಿ ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆಯಾಗಿದೆ ಎಂದರು.
ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಅಂಚೆ ಇಲಾಖೆ ಅಧಿಕಾರಿ ಜೀವನ್ ಹಾಗೂ ದಿಶಾ ಸಮಿತಿ ಸದಸ್ಯರಾದ ಮುರುಳಿಧರ ಕಡೆಕಾರ್, ಚಂದ್ರ ಪಂಚವಟಿ, ವೀಣಾ ಎಸ್. ಶೆಟ್ಟಿ, ರಮೇಶ್ ಪೂಜಾರಿ ಯಳಜಿತ್, ಪ್ರಿಯದರ್ಶಿನಿ ದೇವಾಡಿಗ, ಸಂತೆಕಟ್ಟೆ ನರಸಿಂಹ ನಾಯ್ಕ, ದೇವೇಂದ್ರ ಪ್ರಭು ಮಣಿಪಾಲ, ಆಶಾ ಇಡೂರು ಕುಂಜ್ಞಾಡಿ ಉಪಸ್ಥಿತರಿದ್ದರು.







