ಹೂಡಿಕೆ ಹೆಸರಿನಲ್ಲಿ 3.5 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಮಣಿಪಾಲ, ಮೇ 26: ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಕುಲಶೇಖರದ ಗಣೇಶ ಪಿ.ಎಲ್.(45) ಮಣಿಪಾಲದ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ವರ್ಷದ ಹಿಂದೆ ಹರೀಶ್ ಎಂಬವರ ಮೂಲಕ ಅರವಿಂದ ನಾಯಕ್ ಎಂಬವರ ಪರಿಚಯವಾಗಿತ್ತು. 2025ರ ಮಾ.20ರಂದು ಅರವಿಂದ ನಾಯಕ್ ಅಲೆವೂರಿನಲ್ಲಿರುವ ಅಕ್ಷಯ್ ಎಂಟರ್‌ಪ್ರೈಸಸ್ ಎಂಬ ಕಛೇರಿಯಲ್ಲಿ ಮೈನ್ ಕ್ರಿಪ್ಟೋ ಎಂಬ ಹೆಸರಿನ ಫಾರೆಕ್ಸ್ ಟ್ರೇಡಿಂಗ್ ವ್ಯವಹಾರದ ಬಗ್ಗೆ ಮಾತುಕತೆ ನಡೆದು, ಹೂಡಿಕೆ ಮಾಡಿದ ಮೊತ್ತದ ಮೇಲೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿದ್ದರು.
ಅದರಂತೆ ಗಣೇಶ್, 21/03/2025ರ ಮಾ.21ರಿಂದ ಮಾ.27ರವರೆಗೆ ಆರೋಪಿಯ ಖಾತೆಗೆ 3,50,000ರೂ. ಹಣವನ್ನು ವರ್ಗಾಯಿಸಿದ್ದು, ಬಳಿಕ ಲಾಭ ನೀಡುವುದಾಗಿ ನಂಬಿಸಿ ಹೂಡಿಕೆಯ ಹಣವನ್ನು ಹಾಗೂ ಲಾಭವನ್ನು ನೀಡದೇ, ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story




