ಕೋಡಿ ಬ್ಯಾರೀಸ್‌ನಲ್ಲಿ 42ನೇ ‘ಸ್ವಚ್ಛ ಕಡಲ ತೀರ-ಹಸಿರು ಕೋಡಿ’ ಅಭಿಯಾನ

ಕುಂದಾಪುರ, ಅ.18: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 42ನೇ ’ಸ್ವಚ್ಛ ಕಡಲತೀರ-ಹಸಿರು ಕೋಡಿ’ ಅಭಿಯಾನವು ಶನಿವಾರ ಜರಗಿತು.
ಮುಖ್ಯ ಅತಿಥಿಯಾಗಿ ಉಡುಪಿ ಪರಿಸರ ಪ್ರಾದೇಶಿಕ ನಿರ್ದೇಶಕ ಡಾ. ರಾಮಲಿಂಗ ಮಾತನಾಡಿ, ಈ ಅಭಿಯಾನ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವವನ್ನು ಬೆಳೆಸಲು ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಿದ್ದು ನಿಜಕ್ಕೂ ಉತ್ತಮ. ಪರಿಸರವನ್ನು ಬಿಟ್ಟು ಮನುಷ್ಯ ಬದುಕಲು ಸಾಧ್ಯವಿಲ್ಲ. ಪರಿಸರವನ್ನು ನಾವು ಪ್ರತಿನಿತ್ಯ ಹಾಗೂ ಜೀವನದುದ್ದಕ್ಕೂ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಸಿದ್ದೀಕ್ ಬ್ಯಾರಿ ಮಾತನಾಡಿ, ಈ ವಾತಾವರಣ ದಲ್ಲಿ ಕಲಿಯುವಂತವರು ಭಾಗ್ಯವಂತರು, ಬೆಳಿಗ್ಗೆ ಬೇಗನೇ ಎದ್ದು ತನಗೋಸ್ಕರ ಅಲ್ಲದೆ ಸಮಾಜಕ್ಕೋಸ್ಕರ ಒಳಿ ತನ್ನು ಮಾಡುವವನು ನಿಜಕ್ಕೂ ದೇವರಿಗೆ ಇಷ್ಟ ಆಗುತ್ತಾನೆ. ಈ ಅಭಿಯಾನ ಮಕ್ಕಳಿಗೆ ಒಂದು ವರದಾನವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಈ ಅಭಿಯಾನಕ್ಕೆ ಸಮಸ್ತರ ಸಹಕಾರವಿದೆ. ಹಾಗೆಯೇ ಈ ಅಭಿಯಾನವು ನಿರಂತರವಾಗಿ ಸಾಗು ತ್ತಲೇ ಇರಲಿ, ಅಂತೆಯೇ ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ಕಲಿತು ನಿಮ್ಮ ತಂದೆತಾಯಿಯವರಿಗೆ, ಊರಿಗೆ, ಸಂಸ್ಥೆಗೆ, ರಾಷ್ಟ್ರಕ್ಕೆ, ಉತ್ತಮ ಹೆಸರುಗಳಿಸಿ, ಉತ್ತಮ ಪ್ರಜೆಗಳಾಗಿ ಬದುಕಬೇಕು ಎಂದು ತಿಳಿಸಿದರು.
ಅಭಿಯಾನದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಡಾ.ಆಸೀಫ್ ಬ್ಯಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಅಶ್ವಿನಿ ಶೆಟ್ಟಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಂಗ ಸಂಸ್ಥೆಗಳ ಶಾಲಾಭಿವೃದ್ಧಿ ಮತ್ತು ಸಲಹಾ ಮಂಡಳಿಯ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಸಂಸ್ಥೆಯ ಹಿತೈಷಿ ಬಳಗ, ಊರಿನ ಗಣ್ಯರು, ಪೋಷಕರು, ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡರು.
ಬಿ.ಎಡ್ ಪ್ರಶಿಕ್ಷಣಾರ್ಥಿ ಸ್ವಾತಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.







