Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ರಂಗಭೂಮಿ ಉಡುಪಿ 44ನೇ ರಾಜ್ಯಮಟ್ಟದ ಕನ್ನಡ...

ರಂಗಭೂಮಿ ಉಡುಪಿ 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ: ರಂಗಾಸ್ಥೆ ಬೆಂಗಳೂರು ತಂಡದ ‘ದ್ರೋಪತಿ ಹೇಳ್ತವ್ಳೆ’ಗೆ ಪ್ರಥಮ ಬಹುಮಾನ

ವಾರ್ತಾಭಾರತಿವಾರ್ತಾಭಾರತಿ4 Dec 2023 9:24 PM IST
share
ರಂಗಭೂಮಿ ಉಡುಪಿ 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ: ರಂಗಾಸ್ಥೆ ಬೆಂಗಳೂರು ತಂಡದ ‘ದ್ರೋಪತಿ ಹೇಳ್ತವ್ಳೆ’ಗೆ ಪ್ರಥಮ ಬಹುಮಾನ

ಉಡುಪಿ: ಉಡುಪಿ ರಂಗಭೂಮಿ ನಡೆಸಿದ 44ನೇ ವರ್ಷದ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಗಣೇಶ ಮಂದಾರ್ತಿ ನಿರ್ದೇಶನದಲ್ಲಿ ಬೆಂಗಳೂರಿನ ರಂಗಾಸ್ಥೆ ಟ್ರಸ್ಟ್ ಪ್ರದರ್ಶಿಸಿದ ಪೌರಾಣಿಕ ನಾಟಕ ‘ದ್ರೋಪತಿ ಹೇಳ್ತವ್ಳೆ’ ನಾಟಕವು ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ಬಹುಮಾನ, 35,000ರೂ. ನಗದು ಮತ್ತು ಸ್ಮರಣಿಕೆಯೊಂದಿಗೆ ಡಾ.ಟಿಎಂಎ ಪೈ ಸ್ಮಾರಕ ಪರ್ಯಾಯ ಫಲಕ ಹಾಗೂ ಎಸ್.ಎಲ್. ನಾರಾಯಣ ಭಟ್ ಸ್ಮಾರಕ ಸ್ಮರಣಿಕೆಗಳನ್ನು ತನ್ನದಾಗಿಸಿಕೊಂಡಿದೆ.

ಬೆಂಗಳೂರಿನ ರಂಗರಥ, ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ನಿರ್ದೇಶನದಲ್ಲಿ ಪ್ರದರ್ಶಿಸಿದ ಆಸಿಫ್ ಕ್ಷತ್ರಿಯ ಅವರ ಪೌರಾಣಿಕ ನಾಟಕ ‘ಕ್ರೌಂಚಗೀತಾ’ ಮಲ್ಪೆ ಮಧ್ವರಾಜ್ ಸ್ಮಾರಕ ದ್ವಿತೀಯ ಬಹುಮಾನದೊಂದಿಗೆ 25,000ರೂ. ನಗದು ಮತ್ತು ಸ್ಮರಣಿಕೆ ಹಾಗೂ ಡಾ. ಆರ್.ಪಿ. ಕೊಪ್ಪೀಕರ್ ಸ್ಮಾರಕ ಪರ್ಯಾಯ ಫಲಕ ಮತ್ತು ಯು.ಪಿ. ಶೆಣೈ ಸ್ಮಾರಕ ಸ್ಮರಣಿಕೆಯನ್ನು ಗೆದ್ದುಕೊಂಡಿದೆ.

ಮೂರನೇ ಬಹುಮಾನವು ಬೆಂಗಳೂರಿನ ರಂಗಪಯಣ ತಂಡ ಪ್ರದರ್ಶಿಸಿದ ಸಾ.ರಾ.ಅಬೂಬಕ್ಕರ್ ಅವರ ರಚನೆಯ ‘ಚಂದ್ರಗಿರಿ ತೀರದಲ್ಲಿ’ ನಾಟಕದ ಪಾಲಾಗಿದೆ. ನಯನಾ ಜೆ.ಸೂಡ ನಿರ್ದೇಶನದಲ್ಲಿ ಪ್ರದರ್ಶನ ಗೊಂಡ ಈ ನಾಟಕಕ್ಕೆ ಪಿ.ವಾಸುದೇವ ರಾವ್ ಸ್ಮಾರಕ ಪ್ರಶಸ್ತಿ ಹಾಗೂ 15,000 ರೂ. ನಗದು ಬಹುಮಾನದೊಂದಿಗೆ ಸಖೂಬಾಯಿ ಶ್ರೀಧರ ನಾಯಕ್ ಕೊಕ್ಕರ್ಣೆ ಸ್ಮಾರಕ ಸ್ಮರಣಿಕೆ ಪಡೆಯಲಿದೆ ಎಂದು ರಂಗಭೂಮಿಯ ಪ್ರಕಟನೆ ತಿಳಿಸಿದೆ.

ನ.22ರಿಂದ ಡಿ.3ರರೆಗೆ ನಡೆದ ಈ ಬಾರಿಯ ಸ್ಪರ್ಧೆಯಲ್ಲಿ ಒಟ್ಟು 12 ನಾಟಕಗಳು ಪ್ರದರ್ಶನಗೊಂಡಿದ್ದವು. ಉಳಿದಂತೆ ಉಳಿದ ವೈಯಕ್ತಿ ಪ್ರಶಸ್ತಿಗಳ ವಿವರ ಹೀಗಿದೆ.

ಶ್ರೇಷ್ಠ ನಿರ್ದೇಶನ: ದ್ರೋಪತಿ ಹೇಳವ್ಳೆ ನಾಟಕದ ಗಣೇಶ್ ಮಂದಾರ್ತಿ (ಪ್ರಥಮ, ಒಟ್ಟು 10,000ರೂ.ನಗದು), ಕ್ರೌಂಚಗೀತಾ ನಾಟಕದ ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ (ದ್ವಿತೀಯ, ಒಟ್ಟು 6,000ರೂ.) ಹಾಗೂ ಚಂದ್ರಗಿರಿ ತೀರದಲ್ಲಿ ನಾಟಕದ ನಯನಾ ಜೆ.ಸೂಡ (ತೃತೀಯ, 4,000ರೂ.).

ಶ್ರೇಷ್ಠ ನಟ: ಬೆಂಗಳೂರು ವಿವಿಯ ಕಲಾ ಮೈತ್ರಿ ತಂಡದ ‘ಮಂಟೇಸ್ವಾಮಿ ಕಥಾ ಪ್ರಸಂಗದ ನೀಲಗಾರ ಪಾತ್ರಧಾರಿ ಗೋಪಾಲಕೃಷ್ಣಪ್ಪ ಎನ್. (ಪ್ರಥಮ ಬಹುಮಾನ, 3,000ರೂ.), ಸಮುದಾಯ ದಾರವಾಡ ತಂಡದ ‘ದೇವರ ಹೆಣ’ದ ಠೊಣ್ಣಿ ಪಾತ್ರಧಾರಿ ಜೋಸೆಫ್ ಮಲ್ಲಾಡಿ (ದ್ವಿತೀಯ, 2000), ಮಂಟೇಸ್ವಾಮಿ ಕಥಾ ಪ್ರಸಂಗದ ಮಂಟೇಸ್ವಾಮಿ ಪಾತ್ರಧಾರಿ ಕೆ.ಶಂಕರ್ (ತೃತೀಯ, 1,000ರೂ.).

ಶ್ರೇಷ್ಠ ನಟಿ: ದ್ರೋಪತಿ ಹೇಳ್ತವ್ಳೆ ನಾಟಕದ ದ್ರೋಪತಿ-3 ಪಾತ್ರಧಾರಿಣಿ ವೈಷ್ಣವಿ ಶ್ರೀಕಾಂತ್ ಚಕ್ರಪಾಣಿ (ಪ್ರಥಮ, 3,000ರೂ.), ಚಂದ್ರಗಿರಿ ತೀರದಲ್ಲಿ ನಾಟಕದ ನಾದಿರ ಪಾತ್ರಧಾರಿಣಿ ನಯನಾ ಜೆ.ಸೂಡ ಹಾಗೂ ಕ್ರೌಂಚಗೀತಾ ನಾಟಕದ ಸೀತಾ ಪಾತ್ರಧಾರಿಣಿ ಶ್ವೇತಾ ಎಸ್.(ದ್ವಿತೀಯ, 2,000ರೂ.), ದ್ರೋಪತಿ ಹೇಳ್ತವ್ಳೆ ನಾಟಕದ ದ್ರೋಪತಿ-2 ಪಾತ್ರಧಾರಿಣಿ ಅನನ್ಯ ಸುರೇಶ್ ಹಾಗೂ ಚಂದ್ರಗಿರಿ ತೀರದಲ್ಲಿ ನಾಟಕದ ಫಾತಿಮಾ ಪಾತ್ರಧಾರಿಣಿ ಚೇತನಾ ಪ್ರಸಾದ್ (ತೃತೀಯ, 1,000ರೂ.).

ಶ್ರೇಷ್ಠ ಸಂಗೀತ: ರಂಗರಥ ತಂಡದ ಕ್ರೌಂಚಗೀತಾ (ಪ್ರಥಮ, 3,000ರೂ), ರಂಗಾಸ್ಥೆ ಟ್ರಸ್ಟ್‌ನ ದ್ರೋಪತಿ ಹೇಳ್ತವ್ಳೆ (ದ್ವಿತೀಯ, 2,000) ಹಾಗೂ ಕಲಾಮೈತ್ರಿ ತಂಡದ ಮಂಟೇಸ್ವಾಮಿ ಕಥಾ ಪ್ರಸಂಗ (ತೃತೀಯ, 1,000).

ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ: ದ್ರೋಪತಿ ಹೇಳ್ತವ್ಳೆ (ಪ್ರಥಮ), ಕ್ರೌಂಚಗೀತಾ(ದ್ವಿತೀಯ, 2,000), ಸಮುದಾಯ ದಾರವಾಡದ ದೇವರ ಹೆಣ (ತೃತೀಯ, 1,000).

ಶ್ರೇಷ್ಠ ಪ್ರಸಾಧನ: ಭುವನ್ ಮಣಿಪಾಲ ಮತ್ತು ರವಿಕುಮಾರ್. ನಾಟಕ -ದ್ರೋಪತಿ ಹೇಳ್ತವ್ಳೆ (ಪ್ರಥಮ, 3000), ಜೈರಾಜ್ ಹುಸ್ಕೂರು, ನಾಟಕ - ಚಂದ್ರಗಿರಿ ತೀರದಲ್ಲಿ ಹಾಗೂ ಕ್ರೌಂಚಗೀತಾ ನಾಟಕ (ದ್ವಿತೀಯ, 2000), ದಿನೇಶ್ ಚಮ್ಮಾಳಿಗೆ ನಾಟಕ - ಬೆರಳ್‌ಗೆ ಕೊರಳ್ ( ನಾಲ್ವಡಿ ಸೋಶಿಯಲ್ ಕಲ್ಚರಲ್ ಎಜ್ಯುಕೇಶನಲ್ ಟ್ರಸ್ಟ್ ಮೈಸೂರು) ಹಾಗೂ ಸಂತೋಷ್ ಮಹಾಲೆ ನಾಟಕ: ದೇವರ ಹೆಣ (ತೃತೀಯ, 1000).

ಶ್ರೇಷ್ಠ ರಂಗ ಬೆಳಕು: ಪೃಥ್ವಿನ್ ಕೆ. ಉಡುಪಿ,ನಾಟಕ - ದ್ರೋಪತಿ ಹೇಳ್ತವ್ಳೆ (ಪ್ರಥಮ, 3000ರೂ), ರವಿಶಂಕರ್, ನಾಟಕ- ಕ್ರೌಂಚಗೀತಾ (ದ್ವಿತೀಯ, 2000ರೂ.), ಅರುಣ್ ಮೂರ್ತಿ, ನಾಟಕ- ಮಾರನಾಯಕ, ತಂಡ-ಗಮ್ಯ ಶ್ರೀರಂಗ ಪಟ್ಟಣ, ಮಂಡ್ಯ (ತೃತೀಯ, 1000).

ಶ್ರೇಷ್ಠ ಹಾಸ್ಯನಟನೆ: ಅಕ್ಷರ ಜ್ಞಾನ ಕಲಾ ಸಂಘ ಮರಿಯಮ್ಮನಹಳ್ಳಿ, ವಿಜಯನಗರ ತಂಡದ ಬೆಪ್ಪ ತಕ್ಕಡಿ ಬೋಳೇ ಶಂಕರ ನಾಟಕದ ಕೋಡಂಗಿ ಪಾತ್ರಧಾರಿ ಮಂಜು ತಳವಾರ(ಸ್ಮರಣಿಕೆ ಮತ್ತು 2000ರೂ. ನಗದು).

ಶ್ರೇಷ್ಠ ಬಾಲ ನಟನೆ: ರಂಗಪಯಣ ಬೆಂಗಳೂರು ತಂಡದ ಚಂದ್ರಗಿರಿ ತೀರದಲ್ಲಿ ನಾಟಕದ ಪುಟ್ಟ ನಾದಿರ ಪಾತ್ರಧಾರಿ ಪರೀಕ್ಷಿತ್ ಹಾಗೂ ಅದೇ ನಾಟಕದ ಪುಟ್ಟ ಜಮೀಲ ಪಾತ್ರಧಾರಿಣಿ ಪ್ರಣಮ್ಯಾ (ಸ್ಮರಣಿಕೆ, 1000).

ಮೆಚ್ಚುಗೆ ಬಹುಮಾನಗಳು: ದ್ರೋಪತಿ ಹೇಳ್ತವ್ಳೆ ನಾಟಕದ ದ್ರೋಪತಿ -1 ಪಾತ್ರಧಾರಿಣಿ ಮಂದಾರ ಹೆಬ್ಬಾರ್, ಮಾರನಾಯಕ ನಾಟಕದ ಮಾರನಾಯಕ ಪಾತ್ರಧಾರಿ ಆದಿತ್ಯ ಭಾರದ್ವಾಜ್, ಚಂದ್ರಗಿರಿ ತೀರದಲ್ಲಿ ನಾಟಕದ ಮಹಮ್ಮದ್ ಖಾನ್ ಪಾತ್ರಧಾರಿ ವಿನೋದ್ ಜ್ಯೋತಿನಗರ, ಅಭಿಜ್ಞಾ ಟ್ರಸ್ಟ್ ಬೆಂಗಳೂರು ತಂಡದ ಚೋರ ಪುರಾಣ ನಾಟಕದ ಚೋರ ಪಾತ್ರಧಾರಿ ಪಿ.ಎಸ್. ರೇಣುಕಾರಾಧ್ಯ, ನಾಲ್ವಡಿ ಸೋಶಿಯಲ್ ಕಲ್ಚರಲ್ ಎಜ್ಯುಕೇಶನಲ್ ಟ್ರಸ್ಟ್ ಮೈಸೂರು ತಂಡದ ಬೆರಳ್‌ಗೆ ಕೊರಳ್ ನಾಟಕದ ಏಕಲವ್ಯ ಪಾತ್ರಧಾರಿ ಅಕ್ಷರ ಎನ್. ವಿಶ್ವದೀಪ್.

ಶಿಸ್ತಿನ ತಂಡ: ಗಮ್ಯ ಶ್ರೀರಂಗಪಟ್ಟಣ, ಮಂಡ್ಯ (ಪ್ರಶಸ್ತಿ, 5000ರೂ. ನಗದು).

ಈ ಬಾರಿ ಸ್ಪರ್ಧೆಯ ತೀರ್ಪುಗಾರರಾಗಿ ಉಡುಪಿಯ ಕೆ. ಲಕ್ಷ್ಮೀನಾರಾ ಯಣ ಭಟ್, ಹೆಗ್ಗೋಡಿನ ಶ್ರೀಪಾದ್ ಭಾಗವತ್, ಮೈಸೂರಿನ ವಿನಾಯಕ ಭಟ್ ಹಾಸನಗಿ, ತಿಪಟೂರಿನ ಸತೀಶ್ ತಿಪಟೂರು ಹಾಗೂ ಉಡುಪಿಯ ಎಂ.ಶ್ರೀನಿವಾಸ ಭಟ್ ಸಹಕರಿಸಿದ್ದರು.

ಜನವರಿ ಕೊನೆ ವಾರ ಪ್ರಶಸ್ತಿ ಪ್ರದಾನ

ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಜನವರಿ 4ನೇ ವಾರದಲ್ಲಿ ನಡೆಯುವ ರಂಗಭೂಮಿ ರಂಗೋತ್ಸವದ ಸಂದರ್ಭದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ರಂಗಾಸ್ಥೆ ಟ್ರಸ್ಟ್ ಬೆಂಗಳೂರು ತಂಡದ ದ್ರೋಪತಿ ಹೇಳ್ತವ್ಳೆ ನಾಟಕದ ಮರು ಪ್ರದರ್ಶನ ಇರುವುದು ಎಂದು ರಂಗಭೂಮಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.












share
ವಾರ್ತಾಭಾರತಿ
ವಾರ್ತಾಭಾರತಿ
Next Story
X