ಕೊಲ್ಲೂರು ದೇವಳದಲ್ಲಿ 5 ಜೋಡಿಗಳಿಗೆ ’ಮಾಂಗಲ್ಯ ಭಾಗ್ಯ’

ಕುಂದಾಪುರ: ಸರಕಾರದ ’ಮಾಂಗಲ್ಯ ಭಾಗ್ಯ’ ಯೋಜನೆಯಡಿ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬುಧವಾರ ನಡೆಯಿತು.
ಕಂಬದಕೋಣೆಯ ಸುಬ್ರಮಣ್ಯ ಪೂಜಾರಿ- ಆಲೂರಿನ ಅಶ್ವಿನಿ, ಹೆಂಗವಳ್ಳಿಯ ಅಜಿತ್- ಹುಣ್ಸೆಮಕ್ಕಿಯ ಮುಕಾಂಬು, ಹುಣ್ಸೆ ಮಕ್ಕಿ ವಿಠಲ- ಹೆಂಗವಳ್ಳಿಯ ಅನಿತಾ, ಹಳ್ಳಿಹೊಳೆಯ ಅನಿಲ್- ಹಳ್ಳಿಹೊಳೆಯ ವಸಂತಿ, ಹಕ್ಲಾಡಿಯ ಚಂದ್ರಶೇಖರ್-ಕುಂದಾಪುರದ ಜಲಜ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವಧುವಿಗೆ 40 ಸಾವಿರ ರೂ. ಮೌಲ್ಯದ ಚಿನ್ನದ ತಾಳಿ, 2 ಚಿನ್ನದ ಗುಂಡು ನೀಡಲಾಯಿತು. ವರನಿಗೆ ಹಾರ, ಪಂಚೆ, ಶಲ್ಯ ಶರ್ಟ್ ಕೊಳ್ಳಲು 5 ಸಾವಿರ, ವಧುವಿಗೆ ಹಾರ, ಧಾರೆ ಸೀರೆ, ರವಿಕೆ ಕೊಳ್ಳಲು 10 ಸಾವಿರ ಪ್ರೋತ್ಸಾಹಧನದ ಚೆಕ್ ನೀಡಲಾಯಿತು.
ಕೊಲ್ಲೂರು ಗ್ರಾ.ಪಂ ಅಧ್ಯಕ್ಷೆ ವನೀತಾ ಉದಯ ಶೇರುಗಾರ್, ಉಪಾಧ್ಯಕ್ಷ ನಾಗೇಶ, ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರಶಾಂತ ಕುಮಾರ್ ಶೆಟ್ಟಿ, ಬೈಂದೂರು ತಹಶಿಲ್ದಾರ್ ಪ್ರದೀಪ್ ಆರ್., ಕೊಲ್ಲೂರು ಶ್ರೀಮೂಕಾಂಭಿಕಾ ದೇವಸ್ಥಾನದ ಸಹಾಯಕ ಕಾರ್ಯನಿರ್ವ ಹಣಾಧಿಕಾರಿ ಪುಷ್ಪಲತಾ, ಕೊಲ್ಲೂರು ಗ್ರಾಮ ಆಡಳಿತಾಧಿಕಾರಿ ವಿರೇಶ್ ಮೊದಲಾದವರಿದ್ದರು.
ಉಪಾಧಿವಂತರು ಹಾಗೂ ಕ್ಷೇತ್ರ ಪುರೋಹಿತರಾದ ವೇದಮೂರ್ತಿ ಗಜಾನನ ಜೋಯಿಸ್ ವಿವಾಹ ವಿಧಾನಗಳನ್ನು ನೆರವೇರಿಸಿದರು. ಬೀಸಿನಪಾರೆ ಮೂಕಾಂಬಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜೀವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







