ಐಎಎಸ್ ಅಧಿಕಾರಿಯಾಗುವಾಸೆ: ಎಸ್ಎಸ್ಎಲ್ಸಿಯಲ್ಲಿ 5ನೇ ಸ್ಥಾನ ಪಡೆದ ಪ್ರತ್ವಿತಾ ಶೆಟ್ಟಿ
ಕುಂದಾಪುರ, ಮೇ 9: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎಕ್ಸ್ಲೆಂಟ್ ಮತ್ತು ಲಿಟ್ಸ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರತ್ವಿತಾ ಪಿ.ಶೆಟ್ಟಿ 625ರಲ್ಲಿ 621 ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ 5 ನೇ ಸ್ಥಾನ ಹಾಗೂ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ವಿದ್ಯಾರ್ಥಿನಿಯನ್ನು ಸನ್ಮಾನಿಸ ಲಾಯಿತು. ಅಲ್ಲದೆ ಸಂಸ್ಥೆಯ ವತಿಯಿಂದ 10 ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತ್ವಿತಾ ಪಿ.ಶೆಟ್ಟಿ, ಮುಂದೆ ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವ ಆಸೆಯಿದೆ. ನಮ್ಮ ಶಾಲೆಯ ಶಿಕ್ಷಕರು ಸಂಜೆ 6 ರ ತನಕ ನಮ್ಮ ಜೊತೆ ನಿಂತು ನಿರಂತರ ತರಬೇತಿ ನೀಡಿರುವುದರಿಂದ ಈ ಸಾಧನೆ ಮಾಡಲು ಸಾಧ್ಯ ವಾಯಿತು ಎಂದರು.
ಎಂ.ಎಂ.ಹೆಗ್ಡೆ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎಂ. ಮಹೇಶ ಹೆಗ್ಡೆ ಶುಭಹಾರೈಸಿದರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.