ಬೆಂಗಳೂರು - ಕಾರವಾರ ರೈಲಿಗೆ 5 ಹೆಚ್ಚುವರಿ ಬೋಗಿ ಸೇರ್ಪಡೆ

ಉಡುಪಿ, ಅ.28: ಕೆಎಸ್‌ಆರ್ ಬೆಂಗಳೂರು- ಕಾರವಾರ- ಕೆಎಸ್‌ಆರ್ ಬೆಂಗಳೂರು ನಡುವೆ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕ ನೆಲೆಯಲ್ಲಿ ಐದು ಹೆಚ್ಚುವರಿ ಬೋಗಿ ಗಳನ್ನು ಸೇರ್ಪಡೆಗೊಳಿಸಲು ಕೆಆರ್‌ಸಿಎಲ್ ನಿರ್ಧರಿಸಿದೆ.
ಕೆಎಸ್‌ಆರ್ ಬೆಂಗಳೂರಿನಿಂದ ಹೊರಡು ರೈಲು ನಂ.16595 ನವೆಂಬರ್ 2ರಿಂದ 2026ರ ಫೆಬ್ರವರಿ 2ರವರೆಗೆ ಹೆಚ್ಚುವರಿ ಬೋಗಿಗಳೊಂದಿಗೆ ಸಂಚರಿಸಲಿದೆ. ಅದೇ ರೀತಿ ಕಾರವಾರದಿಂದ ಬೆಂಗಳೂರಿಗೆ ತೆರಳುವ ರೈಲು ನಂ.16596 ನವೆಂಬರ್ 3ರಿಂದ 2026ರ ಫೆ.2ರವರೆಗೆ ಐದು ಹೆಚ್ಚುವರಿ ಬೋಗಿಗಳೊಂದಿಗೆ ಸಂಚರಿಸಲಿದೆ.
ತ್ರಿ ಟಯರ್ ಎಸಿ ಇಕಾನಮಿ ಎರಡು ಬೋಗಿ, ಸ್ಲೀಪರ್ 1 ಹಾಗೂ ಎರಡು ಸಾಮಾನ್ಯ ಬೋಗಿಗಳನ್ನು ನ.2ರಿಂದ ಈ ರೈಲಿಗೆ ಸೇರ್ಪಡೆಗೊಳಿ ಸಲಾಗುವುದು. ಈ ಮೂಲಕ ಪಂಚಗಂಗಾ ಎಕ್ಸ್‌ಪ್ರಸ್ ರೈಲು ಇನ್ನು ಮುಂದೆ 19 ಬೋಗಿಗಳೊಂದಿಗೆ ಸಂಚರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದೇ ರೀತಿ ನ.3ರಿಂದ 2026ರ ಫೆ.2ರವರೆಗೆ ಕಾರವಾರ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ಸಂಚರಿಸುವ ರೈಲು ಸಹ ಹೆಚ್ಚುವರಿ ಬೋಗಿಗಳೊಂದಿಗೆ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.





