ಹೂಡಿಕೆ ಹೆಸರಿನಲ್ಲಿ 50ಲಕ್ಷ ರೂ. ಆನ್‌ಲೈನ್ ವಂಚನೆ

ಉಡುಪಿ, ಸೆ.11: ಹಣ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಬಲಪಾಡಿಯ ರಾಜಶೇಖರ್(62) ಎಂಬವರು ಟ್ರೇಡಿಂಗ್ ಲಿಂಕ್‌ಗೆ ಸೇರಿಕೊಂಡಿದ್ದು, ಅಪರಿಚಿತರು ಹೇಳಿದಂತೆ ಇವರು ಜು.16ರಿಂದ ಆ.13ರವರೆಗೆ ಹಂತ ಹಂತವಾಗಿ ಸುಮಾರು 52,70,955ರೂ. ಹಣವನ್ನು ಹೂಡಿಕೆ ಮಾಡಿ ದ್ದರು. ಇದರಲ್ಲಿ 2,47,900ರೂ. ಹಣವನ್ನು ವಾಪಾಸು ಪಡೆದಿದ್ದರು. ಉಳಿದ 50,23,055ರೂ. ಹಣವನ್ನು ಆರೋಪಿ ಗಳು ವಾಪಾಸು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.
Next Story





