ಆರ್‌ಟಿಓ ಹೆಸರಿನಲ್ಲಿ ವಾಟ್ಸಾಪ್ ಸಂದೇಶ: 5.63ಲಕ್ಷ ರೂ. ಆನ್‌ಲೈನ್ ವಂಚನೆ

ಕಾರ್ಕಳ, ಜೂ.6: ವಾಟ್ಸಾಪ್ ಮೂಲಕ ಆರ್‌ಟಿಓ ಹೆಸರಿನಲ್ಲಿ ಪಿಡಿಎಫ್ ಫೈಲ್ ಕಳುಹಿಸಿ ಖಾತೆಯಿಂದ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಸುದೇವ ಎಂಬವರಿಗೆ ಜೂ.4ರಂದು ಆರ್‌ಟಿಓ ಪಿಡಿಎಫ್ ವಾಟ್ಸಾಪ್ ಸಂದೇಶ ಬಂದಿದ್ದು, ಅದನ್ನು ಓಪನ್ ಮಾಡಲು ಪ್ರಯತ್ನಿಸಿ ದರು. ಬಳಿಕ ಹಲವು ಬಾರಿ ಓಟಿಪಿ ಬಂದಿತ್ತು. ನಂತರ ಇವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 5,63,117ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.
Next Story




