ಕುಂಜಾಲು: ಜು.6ರಂದು ಸಾಮರಸ್ಯ ನಡಿಗೆ ಕಾರ್ಯಕ್ರಮ

ಉಡುಪಿ, ಜು.5: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ, ಸಹಬಾಳ್ವೆ ಮತ್ತು ಮಾನವ ಬಂಧುತ್ವ ಉಡುಪಿ ವಲಯ ಹಾಗೂ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಸೌಹಾರ್ದ ಸಭೆ ಜು.6ರಂದು ಬೆಳಗ್ಗೆ 10.30ಕ್ಕೆ ಬ್ರಹ್ಮವಾರದ ಕುಂಜಾಲು ಕೇಳಪೇಟೆ ಯಿಂದ ನೀಲಾವರ ಕ್ರಾಸ್‌ವರೆಗೆ ಸಾಮರಸ್ಯ ನಡಿಗೆ ಹಾಗೂ ನೀಲಾವರ ಕ್ರಾಸ್‌ನಲ್ಲಿ ಸಭೆ ನಡೆಯಲಿದೆ.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಚಿಂತಕರಾದ ಎಂ.ಜಿ.ಹೆಗ್ಡೆ, ಸ್ಟಿವನ್ ವಿಕ್ಟರ್ ಲೂವೀಸ್, ಮುಹಮ್ಮದ್ ರಶೀದ್ ಕಣ್ಣಂಗಾರ್, ಪ್ರೊ.ಫಣಿರಾಜ್, ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್ ರಾಘವೇಂದ್ರ ಶೆಟ್ಟಿ ಕರ್ಜೆ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story