ಲಾಡ್ಜ್‌ನಲ್ಲಿ ಇಸ್ಪೀಟು ಜುಗಾರಿ: 6 ಮಂದಿ ಸೆರೆ

ಬ್ರಹ್ಮಾವರ, ಆ.1: ಬ್ರಹ್ಮಾವರ ಲಾಡ್ಜ್‌ವೊಂದರ ರೂಮಿನಲ್ಲಿ ಜು.31ರಂದು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರು ಮಂದಿ ಆರೋಪಿಗಳನ್ನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗೋಪಾಲ, ರಮೇಶ್, ಅಭಿಲಾಷ, ವಿಕ್ರಮ್, ರತ್ನಾಕರ, ಹುಸೇನ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು ನಗದು 2,38,000ರೂ. ನಗದು, ಐದು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





