ಏಷ್ಯಾ-ಫೆಸಿಫಿಕ್ ರ‍್ಯಾಂಕಿಂಗ್ : ಟ್ಯಾಪ್ಮಿ 6ನೇ ಸ್ಥಾನಕ್ಕೆ

ಉಡುಪಿ, ಸೆ.21: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯ ಆಡಳಿತಕ್ಕೊಳಪಟ್ಟ ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ)2026-27ನೇ ಸಾಲಿನ ಏಷ್ಯಾ-ಫೆಸಿಫಿಕ್ ವಲಯದ ಬ್ಲೂಮ್‌ಬರ್ಗ್ ಬ್ಯುಸಿನೆಸ್‌ವೀಕ್ ಅತ್ಯುತ್ತಮ ಬಿ-ಸ್ಕೂಲ್ ರ್ಯಾಂಕಿಂಗ್‌ನಲ್ಲಿ ಆರನೇ ಸ್ಥಾನಕ್ಕೆ ನೆಗೆದಿದೆ.
2025-26ನೇ ಸಾಲಿನಲ್ಲಿ ಟ್ಯಾಪ್ಮಿ 9ನೇ ಸ್ಥಾನದಲ್ಲಿದ್ದು, ಇದೀಗ ಮೂರು ಸ್ಥಾನ ಮೇಲ್ಕೇರಿ ಆರನೇ ಸ್ಥಾನದಲ್ಲಿದೆ. 2025ನೇ ಸಾಲಿನಲ್ಲಿ ಮೊದಲ ಬಾರಿಗೆ ಏಷ್ಯ- ಫೆಸಿಫಿಕ್ ವಲಯ ಸರ್ವೆಗೆ ಸೇರ್ಪಡೆಗೊಂಡಿದ್ದ ಟ್ಯಾಪ್ಮಿ ತನ್ನ ಎರಡನೇ ವರ್ಷದಲ್ಲೇ ಆರನೇ ಸ್ಥಾನಕ್ಕೆ ನೆಗೆದು ಉತ್ತಮ ಸಾಧನೆ ತೋರಿಸಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
2025-26ನೇ ಸಾಲಿನಲ್ಲಿ 61.8 ಸ್ಕೋರ್‌ನೊಂದಿಗೆ 9ನೇ ಸ್ಥಾನದಲ್ಲಿದ್ದ ಟ್ಯಾಪ್ಮಿ ಈ ಬಾರಿ 63.4 ಸ್ಕೋರ್ ನೊಂದಿಗೆ ಆರನೇ ಸ್ಥಾನದಲ್ಲಿದೆ. ಬ್ಲೂಮ್‌ಬರ್ಗ್ ಬ್ಯುಸಿನೆಸ್‌ವೀಕ್‌ನ ಸರ್ವೆಯ ಹಲವು ವಿಭಾಗಗಳಲ್ಲಿ ಟ್ಯಾಪ್ಮಿ ಮೇಲ್ಮಟ್ಟದ ಸಾಧನೆಯನ್ನು ತೋರಿಸಿದೆ. ನೆಟ್‌ವರ್ಕಿಂಗ್ ಇಂಡೆನ್ಸ್‌ನಲ್ಲಿ ಕಳೆದ ಬಾರಿ 77.0ಅಂಕ ಪಡೆದಿದ್ದ ಸಂಸ್ಥೆ ಈ ಬಾರಿ 81.8 ಅಂಕಗಳಿಸಿದೆ. ಇದು ವಿದ್ಯಾರ್ಥಿಗಳು ಹಾಗೂ ಉದ್ಯೋಗದಾತರ ನಡುವಿನ ಸಂಪರ್ಕ, ಸಂವ ಹನದ ಪ್ರಗತಿಯನ್ನು ತೋರಿಸುತ್ತದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಅದೇ ರೀತಿ ಕಲಿಕಾ ಇಂಡೆಕ್ಸ್‌ನಲ್ಲಿ ಸ್ಕೋರ್ 80.8ರಿಂದ 84.1ಕ್ಕೆ ನೆಗೆದಿದೆ. ಇದು ಪ್ರಸಕ್ತ ವಾಣಿಜ್ಯಸನ್ನಿವೇಶದಲ್ಲಿ ಟ್ಯಾಪ್ಮಿಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಉದ್ಯಮಶೀಲತೆ ಇಂಡೆಕ್ಸ್‌ನಲ್ಲೂ ಕಳೆದ ಬಾರಿ 67.8 ಸ್ಕೋರ್ ಪಡೆದಿದ್ದ ಟ್ಯಾಪ್ಮಿ ಈ ಬಾರಿ 74.8 ಸ್ಕೋರ್ ಗಳಿಸಿದೆ. ಇದು ವಿದ್ಯಾರ್ಥಿಗಳ ಉದ್ಯಮ ಶೀಲತಾ ಪ್ರವೃತ್ತಿಗೆ ನಿದರ್ಶನವೆನ್ನಬಹುದು.
ಟ್ಯಾಪ್ಮಿಯ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿದ ಟ್ಯಾಪ್ಮಿಯ ನಿರ್ದೇಶಕ ಡಾ.ದೇಬಶಿಸ್ ಪ್ರಧಾನ್, ಬ್ಲೂಮ್‌ಬರ್ಗ್ ನಿಗದಿ ಪಡಿಸಿದ ಎಲ್ಲಾ ಪ್ಯಾರಾಮೀಟರ್‌ಗಳಲ್ಲಿ ನಾವು ಈ ಬಾರಿ ಉತ್ತಮ ಸಾದನೆ ತೋರಿಸಿದ್ದೇವೆ ಎಂದರು.






