ಉಡುಪಿ ಜಿಲ್ಲೆಯಲ್ಲಿ 6 ಮನೆಗಳಿಗೆ ಹಾನಿ; 1.5 ಲಕ್ಷ ರೂ. ನಷ್ಟ

ಉಡುಪಿ, ಜೂ.19: ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 15.4ಮೀ.ಮೀ. ಮಳೆಯಾದ ವರದಿ ಬಂದಿದೆ.
ದಿನದಲ್ಲಿ ಒಟ್ಟು ಆರು ಮನೆಗಳಿಗೆ ಹಾನಿಯಾದ ವರದಿ ಬಂದಿದ್ದು, ಒಟ್ಟಾರೆ 1.5 ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪುರ ತಾಲೂಕಿನ ಅಜ್ರಿ ಗ್ರಾಮದ ಜೋಸೆಫ್ ಎಂಬವರ ಮನೆ ಮೇಲೆ ಮರ ಬಿದ್ದು ಹೆಮ್ಮಾಡಿ ಗ್ರಾಮದ ಹೂವಮ್ಮ ಎಂಬವರ ಮನೆಗೆ ಗಾಳಿ-ಮಳೆಯಿಂದ ಹಾನಿಯಾಗಿದ್ದು ತಲಾ 40ಸಾವಿರ ರೂ.ನಷ್ಟವಾಗಿದೆ.
ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಕೃಷ್ಣಯ್ಯ ಆಚಾರಿ, ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ವೆಂಕಟೇಶ್, ನಿಟ್ಟೆ ಗ್ರಾಮದ ಮಹದೇವಪ್ಪ ಹಾಗೂ ಬೈಂದೂರು ತಾಲೂಕು ಪಡುವರಿ ಗ್ರಾಮದ ಸುರೇಶ್ ಖಾರ್ವಿ ಎಂಬವರ ಮನೆಗಳಿಗೂ ಮಳೆಯಿಂದ ಭಾಗಶ: ಹಾನಿಯಾಗಿದೆ.
Next Story





