ಹಾವಂಜೆ ಪಕ್ಷಿ ವೀಕ್ಷಣೆ: 65 ಪ್ರಬೇಧದ ಹಕ್ಕಿಗಳ ಗುರುತು

ಉಡುಪಿ, ಡಿ.3: ಹಾವಂಜೆ ಗ್ರಾಮ ಪಂಚಾಯತ್‌ನ ಜೀವ ವೈವಿಧ್ಯ ನಿರ್ವಹಣಾ ಸಮಿತಿ, ಗ್ರಾಮ ವಿಕಾಸ ಸಮಿತಿ, ಮಣಿಪಾಲ ಬರ್ಡರ್ಸ್ ಕ್ಲಬ್ ಸಹಯೋಗದೊಂದಿಗೆ ಭಾವನಾ ಫೌಂಡೇಶನ್ ವತಿಯಿಂದ ‘ಹಾವಂಜೆಯ ಹಕ್ಕಿಗಳು’ ಪಕ್ಷಿ ವೀಕ್ಷಣಾ ಕಾರ್ಯಕ್ರಮ ಕೀಳಂಜೆಯ ಬಳಿಯ ಮದ್ಮಲ್‌ಕೆರೆಯ ಪರಿಸರದಲ್ಲಿ ಶನಿವಾರ ನಡೆಯಿತು.
ಶ್ರೀಲಂಕಾ ಫ್ರಾಗ್‌ಮೌತ್, ಪಿನ್ ಟೈಲ್‌ಡ್ ಸ್ನೈಪ್, ವೆಸ್ಟರ್ನ್ ಮಾರ್ಶ್ ಹ್ಯಾರಿಯರ್, ವೈಟ್‌ಚೀಕ್ಡ್ ಬಾರ್ಬೆಟ್, ಕಾಮನ್ ಇಯೋರಾ, ಸ್ಕೇಲೀ ಬ್ರೆಸ್ಟೆಡ್ ಮುನಿಯಾ, ಬ್ಲಾಕ್ ನೇಪ್ಡ್ ಮೊನಾರ್ಕ್ ಸೇರಿದಂತೆ ಸುಮಾರು 65 ವಿವಿಧ ಪ್ರಬೇಧಗಳ 600ಕ್ಕೂ ಅಧಿಕ ಪಕ್ಷಿಗಳನ್ನು ಕೇವಲ ಒಂದು ಗಂಟೆಯ ಅವಧಿಯಲ್ಲಿ ಗುರುತಿಸಲಾಯಿತು.
ಪಕ್ಷಿ ವೀಕ್ಷಕರಾದ ತೇಜಸ್ವಿ ಆಚಾರ್ಯ, ತೇಜಸ್, ಪಂಚಾಯತ್ ಪಿಡಿಒ ದಿವ್ಯಾಎಸ್., ಅಧ್ಯಕ್ಷೆ ಆಶಾ ಪೂಜಾರಿ, ಉಪಾಧ್ಯಕ್ಷ ಗುರುರಾಜ್ ಕಾರ್ತಿಬೈಲು, ಮಾಜಿ ಅಧ್ಯಕ್ಷ ಅಜಿತ್ ಗೋಳಿಕಟ್ಟೆ, ಮಣಿಪಾಲ ಬರ್ಡ್ ಕ್ಲಬ್‌ನ ಹಲವಾರು ಆಸಕ್ತರು ಹಾಗೂ ಗ್ರಾಮಸ್ಥರು ಮತ್ತು ಮಕ್ಕಳು ಭಾಗವಹಿಸಿದ್ದರು.
ಕಲಾವಿದ ಡಾ.ಜನಾರ್ದನ ಹಾವಂಜೆ ಕಾರ್ಯಕ್ರಮ ನಿರ್ವಹಿಸಿ, ಮಂಜುನಾಥ್ ಪೂಜಾರಿ ಪಕ್ಷಿಗಳ ಪಟ್ಟಿ ಮಾಡಿದರು. ಪಂಚಾಯತ್‌ನ ಸದಾಶಿವ ಕೆ.ಎಸ್. ವಂದಿಸಿದರು.







