Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ರಾಷ್ಟ್ರೀಯ ಹೆದ್ದಾರಿ-66ರ ಬಗ್ಗೆ...

ರಾಷ್ಟ್ರೀಯ ಹೆದ್ದಾರಿ-66ರ ಬಗ್ಗೆ ಬೆಂಗಳೂರಿನ ರಾ.ಹೆ.ಪ್ರಾದೇಶಿಕ ಕಚೇರಿಲಿ ಸಭೆ; ಸಾಲಿಗ್ರಾಮದಲ್ಲಿ ಅಂಡರ್‌ಪಾಸ್ ಬಗ್ಗೆ ವರದಿ ನೀಡಲು ಸೂಚನೆ

ಎರ್ಮಾಳ್ ಮೇಲ್ಸೇತುವೆ ಕಾಮಗಾರಿ ಸ್ಥಗಿತಕ್ಕೆ ಆದೇಶ

ವಾರ್ತಾಭಾರತಿವಾರ್ತಾಭಾರತಿ6 Nov 2026 8:20 PM IST
share
ರಾಷ್ಟ್ರೀಯ ಹೆದ್ದಾರಿ-66ರ ಬಗ್ಗೆ ಬೆಂಗಳೂರಿನ ರಾ.ಹೆ.ಪ್ರಾದೇಶಿಕ ಕಚೇರಿಲಿ ಸಭೆ; ಸಾಲಿಗ್ರಾಮದಲ್ಲಿ ಅಂಡರ್‌ಪಾಸ್ ಬಗ್ಗೆ ವರದಿ ನೀಡಲು ಸೂಚನೆ

ಉಡುಪಿ, ನ.6: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ದಕ್ಷಿಣದ ಹೆಜಮಾಡಿ ಯಿಂದ ಉತ್ತರದ ಬೈಂದೂರುವರೆಗೆ ನಿರಂತರ ಅಪಘಾತಗಳು ನಡೆಯು ತಿದ್ದು, ಇಲ್ಲಿ ಮೂಲಭೂತ ಸೌಕರ್ಯದ ಕೊರತೆ, ಹೆದ್ದಾರಿ ವಿಭಜಕಗಳ ಮಧ್ಯೆ ತಡೆ ಗೋಡೆ, ಅಪಘಾತ ಸಂಭವಿಸುವ ಬ್ಲ್ಯಾಕ್‌ಸ್ಪಾಟ್ ವಲಯಗಳಲ್ಲಿ ಡಿವೈಡರ್‌ಗಳ ಮಧ್ಯೆ ತಡೆಬೇಲಿ ರಚನೆ, ಜನಜಂಗುಳಿ ಮತ್ತು ಬೇಡಿಕೆ ಇರುವ ಕಡೆ ಎಫ್‌ಓಬಿ ನಿರ್ಮಾಣ ಸೇರಿದಂತೆ ವಿವಿಧ ಅಗತ್ಯ ವಿಷಯಗಳ ಕುರಿತಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ನಾಗಸಂದ್ರದಲ್ಲಿ ರುವ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಕಚೇರಿಯಲ್ಲಿ ತುರ್ತುಸಭೆ ನಡೆದು ಹಲವು ವಿಷಯಗಳ ಕುರಿತಂತೆ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಉಡುಪಿಯ ಅಂಬಾಗಿಲು, ಕೋಟ, ಪಡುಬಿದ್ರೆಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆ ಹಾಗೂ ಎನ್.ಹೆಚ್-66ರ ಅಪಘಾತ ವಲಯಗಳ ನಿಯಂತ್ರಣ ಮತ್ತು ಅಭಿವೃದ್ಧಿಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿ ವಿಲಾಸ್ ಬ್ರಾಹ್ಮಣ್‌ಕರ್ ಉಪಸ್ಥಿತಿಯಲ್ಲಿ ಚರ್ಚೆ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ಕೋಟ, ಹೆಜಮಾಡಿಯಿಂದ ಬೈಂದೂರುವರೆಗೆ ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ 10 ತಿಂಗಳಲ್ಲಿ 94 ಮಂದಿ ಅಪಘಾತಕ್ಕೆ ಬಲಿಯಾಗಿ ಸಾವನಪ್ಪಿದ್ದಾರೆ. ಹೆದ್ದಾರಿಯಲ್ಲಿ 14 ಸ್ಥಳಗಳನ್ನು ಅಪಘಾತದ ಬ್ಲ್ಯಾಕ್‌ಸ್ಪಾಟ್‌ಗಳೆಂದು ಗುರುತಿಸಲಾಗಿದ್ದರೂ ಇಲಾಖೆ ನಿರ್ವಹಣೆಯಲ್ಲಿ ತೋರುತ್ತಿರುವ ನಿರ್ಲಕ್ಷದಿಂದ ಸಮಸ್ಯೆ ಗಂಭೀರವಾಗುತ್ತಿದೆ ಎಂದರು.

ಪ್ರಸ್ತಾವಿತ ಎನ್.ಹೆಚ್-66ರ ಸಮಗ್ರ ಡಿಪಿಆರ್ ಮಾಹಿತಿಯನ್ನು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ಮೊದಲಾಗಿ ತರಬೇಕು. ಹಾಗಿಲ್ಲದೆ ಹೋದರೆ ಮುಂದಾಗುವ ಸಮಸ್ಯೆಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯೇ ಹೊಣೆಯಾಗುತ್ತದೆ ಎಂದು ಸಂಸದ ಕೋಟ ಎಚ್ಚರಿಸಿದರು.

ಸರ್ವಿಸ್ ರಸ್ತೆ ಪ್ರಗತಿಯಲ್ಲಿ: ಎನ್.ಹೆಚ್-66ರಲ್ಲಿ ಸದ್ಯ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಿದ ವಿಲಾಸ್ ಬ್ರಾಹ್ಮಣ್‌ಕರ್, ನಿಮ್ಮ ಪ್ರಸ್ತಾವನೆಯ ಮೇರೆಗೆ ಹೆಜಮಾಡಿಯಿಂದ ಕುಂದಾಪುರದವರೆಗೆ ಸಂಪೂರ್ಣ ಸರ್ವಿಸ್ ರಸ್ತೆಗೆ ಹಂತ ಹಂತದಲ್ಲಿ ಅನುಮೋದನೆ ನೀಡಲಾಗಿದೆ. ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ಬ್ರಹ್ಮಾವರ, ಕಲ್ಯಾಣಪುರದ ಬಳಿ ಅಂಬಾಗಿಲು, ಎರ್ಮಾಳು ಮುಂತಾದ ಕಡೆ ಸರ್ವಿಸ್ ರಸ್ತೆಗಳು ಪ್ರಗತಿ ಯಲ್ಲಿದ್ದು, ಕೋಟ ವಿವೇಕ ಹೈಸ್ಕೂಲ್, ಸಾಸ್ತಾನದ ಬಸ್ ನಿಲ್ದಾಣ ಮತ್ತು ಟೋಲ್ ಪ್ಲಾಜಾ ಬಳಿ ಅತಿ ಶೀಘ್ರದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.

ಸಾಲಿಗ್ರಾಮದಲ್ಲಿ ಅಂಡರ್‌ಪಾಸ್: ಸಾಲಿಗ್ರಾಮದ ಗುರುನರಸಿಂಹ ಮತ್ತು ಆಂಜನೇಯ ದೇವಳಕ್ಕೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿ ದಾಟುವ ಸಂದರ್ಭದಲ್ಲಿ ನಡೆಯುವ ಅಪಘಾತಗಳ ಬಗ್ಗೆ ಚರ್ಚೆ ನಡೆದು ಅಂಡರ್‌ಪಾಸ್ ನಿರ್ಮಿಸಲು ಭಕ್ತಾದಿಗಳ ಒತ್ತಾಯವಿದ್ದರೂ ತಾಂತ್ರಿಕ ಕಾರಣ ಹಾಗೂ ನೀರು ಹರಿದು ಹೋಗುವ ಸಮಸ್ಯೆ ಪರಿಶೀಲಿ ಸುವಂತೆ ಮತ್ತು ಅಂಡರ್‌ಪಾಸ್ ಸಮಸ್ಯೆಯ ಬಗ್ಗೆ ಧ್ರುವ ಏಜೆನ್ಸಿಗೆ ವರದಿ ನೀಡುವಂತೆ ವಿಲಾಸ್ ಬ್ರಾಹ್ಮಣ್‌ಕರ್ ಸೂಚಿಸಿದರು.

ಮೇಲ್ಸೇತುವೆ ಕಾಮಗಾರಿ ಸ್ಥಗಿತ: ಕಾಪು ವಿಧಾನಸಭಾ ಕ್ಷೇತ್ರದ ತೆಂಕ ಎರ್ಮಾಳಿನಲ್ಲಿ ರಚನೆಯಾಗುತ್ತಿರುವ ಪಾದಚಾರಿ ಮೇಲ್ಸೇತುವೆಯಿಂದ ಯಾರಿಗೂ ಉಪಯೋಗವಾಗದ ಕಾರಣ ಉಚ್ಚಿಲದ ಬಳಿ ದೇವಸ್ಥಾನ ಮತ್ತು ಪಾದಚಾರಿಗಳಿಗೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸಲು ಸಾರ್ವಜನಿಕರು ಒತ್ತಾಯಿಸುತಿದ್ದಾರೆ. ಈ ಬಗ್ಗೆ ಕಾಮಗಾರಿ ನಿಲ್ಲಿಸುವಂತೆ ನಾನು ಮತ್ತು ಸ್ಥಳೀಯ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಲಿಖಿತ ಪತ್ರ ಕೊಟ್ಟರೂ ಕಾಮಗಾರಿ ಮುಂದುವರೆಯಲು ಕಾರಣವೇನು ಎಂದು ಕೋಟ ಖಾರವಾಗಿ ಪ್ರಶ್ನಿಸಿದರು.

ಸಾರ್ವಜನಿಕರು ಗ್ರಾಮ ಸಭೆಯ ಮೂಲಕ ನಿರ್ಣಯ ಕೈಗೊಂಡು ಮೇಲ್ಸೇತುವೆಯನ್ನು ವಿರೋಧಿಸಿದರೂ ಇಲಾಖೆಯ ನಿಲುವು ಉಡಾಫೆತನ ದ್ದಾಗಿದೆ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಎರ್ಮಾಳು ಮೇಲ್ಸೇತುವೆ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದರು. ಸಂಸದರ ಕೋರಿಕೆಯಂತೆ ತಕ್ಷಣ ಕಾಮಗಾರಿ ನಿಲ್ಲಿಸಲು ಆರ್‌ಓ ಬ್ರಾಹ್ಮಣಕರ್ ಎನ್.ಹೆಚ್ ಅಧಿಕಾರಿಗಳಿಗೆ ಸೂಚಿಸಿದರು.

ಅಂಬಲಪಾಡಿ ಮೇಲ್ಸೆತುವೆ, ಕೆಳಗಿನ ಸರ್ವಿಸ್ ರಸ್ತೆ ಹೊಂಡಗಳಿಂದ ತುಂಬಿದ್ದು ಅದನ್ನು ಕೂಡಲೇ ಸರಿಪಡಿಸುವು ದಾಗಿ ಪ್ರಾಜೆಕ್ಟ್ ಡೈರೆಕ್ಟರ್ ಜಾವೇದ್ ತಿಳಿಸಿದರು. ಸಂತೆಕಟ್ಟೆಯಲ್ಲಿ 5-5 ಮೀ. ಸರ್ವಿಸ್ ರಸ್ತೆಯನ್ನು 7-5ಮೀ.ಗೆ ವಿಸ್ತರಿಸಿ ಸ್ಥಳೀಯ ವಾಹನಗಳ ಸಂಚಾರ ಸುಗಮ ಬಗ್ಗೆ ಸಂಸದ ಕೋಟ ಪ್ರಸ್ತಾಪಿಸಿದ್ದು, ಕೂಡಲೇ ಕಾಮಗಾರಿ ಆರಂಭಿಸಲು ಸೂಚಿಸಿದರು. ಇತ್ತೀಚಿಗೆ ಅಪಘಾತ ನಡೆದ ಕೋಟ ಜಂಕ್ಷನ್ ಬಗ್ಗೆ ಕೂಡಲೇ ವರದಿ ಮಂಡಿಸಿ, ಮುಂದಿನ ಕ್ರಮ ಜರುಗಿಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಉದ್ಯಾವರದ ಬಲಾಯಿಪಾದೆ, ಕಿನ್ನಿಮುಲ್ಕಿ, ಕಟಪಾಡಿ ಮತ್ತು ಗುಂಡ್ಮಿ ಬ್ರಹ್ಮಾವರ ಗಾಂಧಿ ನಗರದವರೆಗೆ ಸರ್ವಿಸ್ ರಸ್ತೆ ರಚಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಕೋಟ ಅಧಿಕಾರಿಗಳಿಗೆ ತಿಳಿಸಿದರು. ಕಟಪಾಡಿಯ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಳ್ಳಲು 2027ರ ಸೆಪ್ಟಂಬರ್‌ವರೆಗೆ ಕಾಲಾವಕಾಶವಿದ್ದು, ಅದಕ್ಕಿಂತ ಮೊದಲೇ ಮುಗಿಸುವುದಾಗಿ ಬ್ರಾಹ್ಮಣ್‌ಕರ್ ಭರವಸೆ ನೀಡಿದರು.

ಹೆಜಮಾಡಿ, ಸಾಸ್ತಾನ ಟೋಲ್ ಪ್ಲಾಜಾಗಳಲ್ಲಿ 20 ಕಿ.ಮೀ. ಒಳಗಿನ ವಾಹನ ಮಾಲಕರಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡುವ ಬಗ್ಗೆ ಕ್ರಮ ಜರಗಿಸಲು ಸಂಸದರು ನೀಡಿದ ಸಲಹೆಗೆ ಸಭೆಯಲ್ಲಿದ್ದ ಟೋಲ್ ಪ್ಲಾಜಾ ಮುಖ್ಯಸ್ಥ ತಿಮ್ಮಯ್ಯ ಅವರಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಬ್ರಾಹ್ಮಣ್‌ಕರ್ ನಿರ್ದೇಶಿಸಿದರು.

ಸಂಸದ ಕೋಟ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಎನ್.ಹೆಚ್‌66 ಯೋಜನಾ ನಿರ್ದೇಶಕ ಜಾವೇದ್, ರಾ.ಹೆ ಪ್ರಾಧಿಕಾರದ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕ ನಿತೀನ್ ಜೋಸೆಫ್, ಡಿಜಿಎಂ ಡಾ. ವಾಣಿಶ್ರೀ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X