ಉಡುಪಿ ಜಿಲ್ಲೆಯಲ್ಲಿ ಶೇ.71ರಷ್ಟು ಮನೆಗಳ ಸಮೀಕ್ಷೆ ಪೂರ್ಣ: ರಾಜ್ಯಕ್ಕೆ ಹೋಲಿಸಿದರೆ ಸಮೀಕ್ಷೆಯಲ್ಲಿ ಕುಂಟುತ್ತಿರುವ ಉಡುಪಿ ಜಿಲ್ಲೆ

ಉಡುಪಿ, ಅ.9: ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿ ರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವಿಸ್ತರಿತ ಗಣತಿಯ ಎರಡನೇ ದಿನದ ಕೊನೆಗೆ ಉಡುಪಿ ಜಿಲ್ಲೆಯಲ್ಲಿ ಶೇ.71.21ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ರಾಜ್ಯದ ಸಾಧನೆಗೆ ಹೋಲಿಸಿದರೆ ಜಿಲ್ಲೆ ತುಂಬಾ ಹಿಂದೆ ಬಿದ್ದಿದೆ. ರಾಜ್ಯದಲ್ಲಿ ಶೇ.84.42ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿರುವ ಮಾಹಿತಿ ಇದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 3,62,093 ಮನೆಗಳ ಗಣತಿ ನಡೆಯ ಬೇಕಾಗಿದ್ದು, ಇಂದು ಸಂಜೆಯವರೆಗೆ ಒಟ್ಟು 2,40,869 ಮನೆಗಳ ಗಣತಿ ಯನ್ನು ಮುಗಿಸಲಾಗಿದೆ. 17ನೇ ದಿನವಾದ ಇಂದು ಒಟ್ಟು 5,497 ಮನೆಗಳ ಜನರ ಗಣತಿಯನ್ನು ಮಾತ್ರ ಸಮೀಕ್ಷೆಗಾರರು ಮಾಡಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ ಮೂರು ತಾಲೂಕುಗಳ ಗಣತಿ ಶೇ.70ನ್ನು ದಾಟಿಲ್ಲ. ಉಡುಪಿ ತಾಲೂಕಿನಲ್ಲಿ ಅರ್ಧದಷ್ಟು ಸಮೀಕ್ಷೆ ಯನ್ನು ಇಂದು ತಲುಪಲಾಗಿದೆ. ಜಿಲ್ಲೆಯ ಒಟ್ಟಾರೆ ಸಾಧನೆಯನ್ನು ಗಮನಿಸಿ ಹೇಳುವುದಾದರೆ ಬೈಂದೂರು ತಾಲೂಕಿ ನಲ್ಲಿ ಅತ್ಯಧಿಕ ಅಂದರೆ 96.74ರಷ್ಟು ಮನೆಗಳ ಗಣತಿಯನ್ನು ಪೂರ್ಣಗೊಳಿಸಲಾಗಿದೆ. ಹೆಬ್ರಿ ತಾಲೂಕು ಎರಡನೇ ಸ್ಥಾನದಲ್ಲಿದ್ದು, ಇಲ್ಲಿ ಶೇ.95ರಷ್ಟು ಗಣತಿ ಮುಗಿದಿದೆ. ಇನ್ನು ಎರಡು ಸಾವಿರದಷ್ಟು ಮನೆಗಳ ಗಣತಿ ಮಾತ್ರ ಬಾಕಿ ಉಳಿದಿದೆ.
ಕನಿಷ್ಠ ಗಣತಿ ನಡೆದಿರುವುದು ಉಡುಪಿ ತಾಲೂಕಿನಲ್ಲಿ. ಇಲ್ಲಿ ಇಂದು ಸಂಜೆಯವರೆಗೆ ಕೇವಲ 51.16ರಷ್ಟು ಮನೆಗಳ ಸರ್ವೆ ಮಾತ್ರ ಮುಗಿದಿದೆ. ಉಳಿದಂತೆ ಕಾರ್ಕಳದಲ್ಲಿ ಶೇ.69 ಹಾಗೂ ಕಾಪುವಿನಲ್ಲಿ ಶೇ.67ರಷ್ಟು ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ನೀಡಿರುವ ಮಾಹಿತಿ ತಿಳಿಸಿದೆ.
ಜಿಲ್ಲೆಯಲ್ಲಿ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡು ಸಮೀಕ್ಷೆಗೆ ಬಾರದ ನಾಲ್ವರು ಶಿಕ್ಷಕರನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಈಗಾಗಲೇ ಅಮಾನತು ಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3231 ಮಂದಿ ಗಣತಿದಾರರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಪ್ರತಿದಿನದ ಗುರಿ 30,139 ಮನೆಗಳಾಗಿವೆ. ವಿವಿಧ ಕಾರಣಗಳಿಂದ ನಿಗದಿತ ದಿನದೊಳಗೆ ಗಣತಿ ಮುಗಿಯಲು ಇಂದು 1,58,201 ಮನೆಗಳ ಗಣತಿ ನಡೆಯಬೇಕಿತ್ತು.
ಗುರುವಾರ ಸಂಜೆಯವರೆಗೆ ತಾಲೂಕುವಾರು ನಡೆದ ಸಮೀಕ್ಷೆಯ ಸಂಪೂರ್ಣ ವಿವರ ಹೀಗಿದೆ.
(ತಾಲೂಕು, ಒಟ್ಟು ಕುಟುಂಬಗಳು, ಬ್ಲಾಕ್‌ಗಳು, ಇಂದು ಪೂರ್ಣಗೊಂಡ ಮನೆ, ಸಮೀಕ್ಷೆ ಪೂರ್ಣಗೊಂಡ ಮನೆಗಳ ವಿವರ, ಶೇಕಡಾವಾರು)
ಬೈಂದೂರು 26,623 246 0305 23,648 96.74
ಹೆಬ್ರಿ 13,422 121 0171 11,063 95.02
ಕುಂದಾಪುರ 66,678 621 0971 50,731 82.63
ಬ್ರಹ್ಮಾವರ 51,775 465 0307 39,525 80.77
ಕಾರ್ಕಳ 58,634 531 0597 40,465 69.26
ಕಾಪು 46,286 403 0833 29,840 67.63
ಉಡುಪಿ 98,675 844 2313 45,597 51.18
ಒಟ್ಟು 362093 3231 5497 240869 71.21







