ಆನ್‌ಲೈನ್ ಟಾಸ್ಕ್: 7.26 ಲಕ್ಷ ರೂ. ವಂಚನೆ

ಕಾಪು, ಜೂ.28: ಆನ್‌ಲೈನ್ ಟಾಸ್ಕ್ ಮೂಲಕ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪುವಿನ ಮೋಹನ್ ಕೋಟ್ಯಾನ್(41) ಎಂಬವರ ಟೆಲಿಗ್ರಾಂ ಖಾತೆಗೆ ಮೇ 8ರಂದು ಇಬ್ಬರು ಅಪರಿಚಿತ ವ್ಯಕ್ತಿ ಲಿಂಕ್ ಕಳುಹಿಸಿದ್ದು, ಆ ಲಿಂಕ್ ಪ್ರಕಾರ ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸ ಲಾಗಿತ್ತು. ಅದರಂತೆ ಮೋಹನ್ ಹಂತ-ಹಂತವಾಗಿ ಸುಮಾರು 7,26,000 ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಹಣವನ್ನು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story





