ಗಂಗೊಳ್ಳಿ| ಸಿಮ್ ಬ್ಲಾಕ್; 77,000 ಎಗರಿಸಿದ ಆನ್‌ಲೈನ್ ಕಳ್ಳರು

ಗಂಗೊಳ್ಳಿ, ಜೂ.19: ಮರವಂತೆ ಗ್ರಾಮದ ಸಂತೋಷ್ ಎಂಬವರು ಜೂ.12ರಂದು ತನ್ನ ಮೊಬೈಲ್‌ಗೆ ಬಂದ ವಾಟ್ಸಪ್ ಲಿಂಕ್ ಒಂದನ್ನು ಒತ್ತಿದಾಗ ಅವರ ಮೊಬೈಲ್ ಸ್ಲಿಮ್ ಬ್ಲಾಕ್ ಆಗಿದ್ದು, ಅವರ ಕೆನರಾ ಬ್ಯಾಂಕ್ ಖಾತೆಯಿಂದ 77,703ರೂ.ವನ್ನು ಯಾರೋ ಆನ್‌ಲೈನ್ ಕಳ್ಳರು ಎಗರಿಸಿರುವುದು ಪತ್ತೆ ಯಾಗಿದೆ.
ಬ್ಲಾಕ್ ಆದ ಮೊಬೈಲ್‌ನ್ನು ಸರಿಪಡಿಸಿ ಅದರಲ್ಲಿದ್ದ ಬ್ಯಾಂಕ್ ಪಾಸ್‌ಬುಕ್ ಪರಿಶೀಲಿಸಿದಾಗ ಈ ವಂಚನೆ ಗೊತ್ತಾಗಿದೆ. ಸಂತೋಷ್ ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Next Story





