ಕೋಟ: 80 ಸಾವಿರ ರೂ. ಮೌಲ್ಯದ ಅಡಿಕೆ ಕಳವು

ಕೋಟ, ಫೆ.21: ಒಣಗಿಸಿ ಮನೆಯಲ್ಲಿ ಶೇಖರಿಸಿ ಇಟ್ಟಿದ್ದ ಒಟ್ಟು 15 ಚೀಲ ಅಡಿಕೆಯನ್ನು ಕಳ್ಳರು ಫೆ.12ರ ರಾತಿಯಿಂದ ಮರುದಿನ ಬೆಳಗಿನ ಒಳಗೆ ಕಳವು ಮಾಡಿರುವುದಾಗಿ ಶಿರಿಯಾದ ಗ್ರಾಮದ ಸರೋಜಿನಿ ಎಂಬವರು ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳವಾದ ಅಡಿಕೆಗಳ ಒಟ್ಟು ಮೌಲ್ಯ 80,000ರೂ.ಗಳೆಂದು ಅಂದಾಜಿಸಲಾಗಿದೆ. ಕೋಟ ಪೊಲೀಸರು ತನಿಖೆ ನಡೆಸುತಿದ್ದಾರೆ.
Next Story





