ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 85 ವರ್ಷ ಮೇಲ್ಪಟ್ಟವರು, ವಿಶೇಷ ಚೇತನರಿಂದ ಮನೆಯಲ್ಲೇ ಮತದಾನ
ಉಡುಪಿ, ಎ.17: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಕೇಂದ್ರಗಳಿಗೆ ತೆರಳಿ ಮತ ಚಲಾಯಿ ಸಲು ಅಸಾಧ್ಯವೆನಿಸಿದ ಒಟ್ಟು 6100 ಮಂದಿ ವಿಶೇಷ ಚೇತನರು ಹಾಗೂ 85 ವರ್ಷ ಮೇಲ್ಪಟ್ಟ ಮತದಾರರಲ್ಲಿ 5919 ಮಂದಿ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಎಡಿಸಿ ಮಮತಾದೇವಿ ತಿಳಿಸಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ ಒಟ್ಟು 4664 ಮಂದಿ ಮನೆಯಲ್ಲೇ ಮತದಾನ ಮಾಡುವ ಅವಕಾಶವನ್ನು ಕೇಳಿದ್ದು, ಇವರಲ್ಲಿ 4512 ಮಂದಿ ಅವಕಾಶವನ್ನು ಬಳಸಿಕೊಂಡು ಮತ ಚಲಾಯಿಸಿದ್ದಾರೆ. ಅದೇ ರೀತಿ 1436 ಮಂದಿ ವಿಶೇಷ ಚೇತನ (ಪಿಡಬ್ಲ್ಯೂಡಿ) ವ್ಯಕ್ತಿಗಳು ಮನೆ ಮತದಾನಕ್ಕೆ ಅವಕಾಶ ಕೇಳಿದ್ದು, 1407 ಮಂದಿ ಅವಕಾಶವನ್ನು ಬಳಸಿಕೊಂಡು ಮನೆಯಲ್ಲೇ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಈ ಮೂಲಕ 152 ಮಂದಿ ಹಿರಿಯ ನಾಗರಿಕರು ಹಾಗೂ 29 ಮಂದಿ ದಿವ್ಯಾಂಗರು ಸೇರಿದಂತೆ ಒಟ್ಟು 181 ಮಂದಿ ಈ ಅವಕಾಶವನ್ನು ಬಳಸಿಕೊ ಳ್ಳಲು ವಿಫಲರಾಗಿದ್ದು ಇನ್ನು ತಮ್ಮ ಮತವನ್ನು ಚಲಾಯಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ನಾಲ್ಕು ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮನೆಯಿಂದಲೇ ಮತ ಹಾಕುವ ಅವಕಾಶ ಪಡೆದ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು ಹಾಗೂ ಮತ ಹಾಕಿದವರ ವಿವರ ಕೆಳಕಂಡಂತಿದೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 1057ಮಂದಿ 85 ವರ್ಷ ಮೇಲ್ಪಟ್ಟ ವಯಸ್ಕ ಮತದಾರರಲ್ಲಿ 1031 ಮಂದಿ, 216 ಪಿಡಬ್ಲ್ಯೂಡಿ ಮತದಾರರಲ್ಲಿ 211 ಮಂದಿ ಇಂದಿನವರೆಗೆ ತಮ್ಮ ಮತ ಚಲಾಯಿಸಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 764 ಹಿರಿಯ ನಾಗರಿಕ ಮತದಾರ ಪೈಕಿ 742 ಮಂದಿ ಹಾಗೂ 197 ವಿಶೇಷ ಚೇತನ ಮತದಾರರ ಪೈಕಿ 196 ಮಂದಿ ಮನೆಯಲ್ಲೇ ತಮ್ಮ ಮತ ಚಲಾಯಿಸಿದ್ದಾರೆ.
ಕಾಪು ಕ್ಷೇತ್ರದಲ್ಲಿ 851 ಹಿರಿಯ ಮತದಾರರು ಮನೆಯಿಂದ ಮತ ಚಲಾಯಿಸುವ ಅವಕಾಶ ಕೇಳಿದ್ದು ಇವರಲ್ಲಿ 823 ಮಂದಿ ಅವಕಾಶವನ್ನು ಬಳಸಿಕೊಂಡರೆ, 250 ಮಂದಿ ವಿಶೇಷ ಚೇತನ ಮತದಾರರ ಪೈಕಿ 248 ಮಂದಿ ಈ ಅವಕಾಶ ವನ್ನು ಬಳಸಿ ತನ್ನ ನೆಚ್ಚಿನ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಕಾರ್ಕಳ ಕ್ಷೇತ್ರದಲ್ಲಿ 854 ಹಿರಿಯ ಮತದಾರರ ಪೈಕಿ 830 ಮಂದಿ ಮತ್ತು 285 ವಿಶೇಷ ಚೇತನ ಮತದಾರರ ಪೈಕಿ 282 ಮಂದಿ ಮನೆಯಲ್ಲಿ ಮತದಾನ ಅವಕಾಶ ಈಡೇರಿಸಿಕೊಂಡಿದ್ದಾರೆ.
ಅದೇ ರೀತಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 91 ಹಿರಿಯ ಮತದಾರರು ಮನೆಯಲ್ಲಿ ಮತದಾನದ ಕೋರಿಕೆ ಸಲ್ಲಿಸಿದ್ದು, ಇವರಲ್ಲಿ 90 ಮಂದಿ ಇದನ್ನು ಬಳಸಿಕೊಂಡಿದ್ದಾರೆ. ಇಲ್ಲಿನ 28 ವಿಶೇಷ ಚೇತನ ಮತದಾರ ರಲ್ಲಿ 27 ಮಂದಿ ಅವಕಾಶವನ್ನು ಬಳಸಿಕೊಂಡಿದ್ದಾರೆ. ಇನ್ನು ಮೂಡಿಗೆರೆ ಕ್ಷೇತ್ರದ 237 ಹಿರಿಯ ಮತದಾರ ಪೈಕಿ 226 ಮಂದಿ ಹಾಗೂ 95 ವಿಶೇಷ ಚೇತನ ಮತದಾರರಲ್ಲಿ 93 ಮಂದಿ ಅವಕಾಶ ಬಳಸಿಕೊಂಡಿದ್ದಾರೆ.
ತರೀಕೆರೆ ಕ್ಷೇತ್ರದ 309 85 ವರ್ಷ ಮೇಲಿನ ಮತದಾರಲ್ಲಿ 291 ಮಂದಿ ಹಾಗೂ 123 ಪಿಡಬ್ಲ್ಯೂಡಿ ಮತದಾರರ ಪೈಕಿ 118 ಮಂದಿ ತಮ್ಮ ಹಕ್ಕನ್ನು ಮನೆಯಲ್ಲೇ ಚಲಾಯಿಸಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 501 ಹಿರಿಯ ವಯಸ್ಸಿನ ಮತದಾರರು ಅವಕಾಶ ಕೋರಿದ್ದು ಇವರಲ್ಲಿ 479 ಮಂದಿ ಅವಕಾಶ ಬಳಸಿದ್ದಾರೆ. 242 ಪಿಡಬ್ಲ್ಯೂಡಿ ಮತದಾರರ ಪೈಕಿ 232 ಮಂದಿ ಮನೆಯಲ್ಲೇ ಮತ ಚಲಾಯಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 6100 ಮತದಾರರಿಗೆ ಮತದಾನ ಮಾಡಲು ಎಪ್ರಿಲ್ 13ರಿಂದ 17ರವರೆಗೆ ಅವಕಾಶ ಕಲ್ಪಿಸಲಾಗಿತ್ತು.