ಉಡುಪಿ ಜಿಲ್ಲಾ ಫುಟ್‌ಬಾಲ್ ತಂಡದಲ್ಲಿ ನಿಟ್ಟೆ ಪಿಯು ಕಾಲೇಜಿನ 9 ಮಂದಿ ವಿದ್ಯಾರ್ಥಿನಿಯರು ಆಯ್ಕೆ

ಉಡುಪಿ, ಅ.8: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರ ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳ ತಾಲೂಕು ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದಿದೆ.
ಕಾರ್ಕಳ ತಾಲೂಕು ತಂಡವನ್ನು ಪ್ರತಿನಿಧಿಸಿದ ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜು ನಿಟ್ಟೆಯ ವಿದ್ಯಾರ್ಥಿ ನಿಯರಾದ ತಂಡದ ನಾಯಕಿ ಸ್ಮೃತಿ ಕೆ. ಶೆಟ್ಟಿ, ಅತ್ಯುತ್ತಮ ಸ್ಟ್ರೈಕರ್ ಪ್ರಶಸ್ತಿ ಪಡೆದರೆ, ಕ್ಲೆರಾ ಭೀಮಣ್ಣನವರ್ ಅತ್ಯುತ್ತಮ ಗೋಲ್‌ಕೀಪರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇದೀಗ ಇವರಿಬ್ಬರೊಂದಿಗೆ ನಿಟ್ಟೆ ಪದವಿ ಪೂರ್ವ ಕಾಲೇಜಿನ ಪ್ರಭಾವತಿ ಹೊಳೆಮ್ಮನವರ್, ಅವಿನ್ಯಾ ಶೆಟ್ಟಿ, ಸುಜೀಕ್ಷಾ, ಲೂರ್ದ್ ಮೇರಿ ತುಮಕಣ್ಣನವರ್, ಅಶ್ವಿನಿ ಹೂಗಾಡಿ, ಮಂಜುಳಾ ದೇಸಾಯಿ, ಶಕುಂತಲಾ ಮೇಲಿನಮನಿ ರಾಜ್ಯ ಮಟ್ಟದ ಟೂರ್ನಿಯಲ್ಲಿ ಜಿಲ್ಲಾ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.




