ಬನ್ನಂಜೆ- 90 ಉಡುಪಿ ನಮನ ಕಾರ್ಯಕ್ರಮ

ಉಡುಪಿ, ಜೂ.23: ವಿದ್ಯಾವಾಚಸ್ಪತಿ ಗೋವಿಂದಾಚಾರ್ಯರ ಬನ್ನಂಜೆ ಬದುಕು, ಸಾಧನೆಯ ಸ್ಮರಣೆ ಗಾಗಿ ಬನ್ನಂಜೆ 90 ಉಡುಪಿ ನಮನ ಕಾರ್ಯಕ್ರಮ ರಾಜ್ಯದ 24 ಕಡೆಗಳಲ್ಲಿ ನಡೆಯಲಿದೆ ಎಂದು ಸಾಂಸ್ಕೃತಿಕ ಚಿಂತಕಿ ವೀಣಾ ಬನ್ನಂಜೆ ತಿಳಿಸಿದ್ದಾರೆ.
ಆ.3ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಬನ್ನಂಜೆ 90ರ ನಮನ ಅಂಗವಾಗಿ ರಾಜಾಂಗಣ ಬಳಿಯ ಮಥುರಾ ಕಂಫರ್ಟ್‌ನಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಬನ್ನಂಜೆ 90ರ ನಮನ ಸಮಿತಿ ಕಾರ್ಯಾಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು. ಬನ್ನಂಜೆಯವರ ಮೂಲಮನೆ ಕುಂಜಿಗುಡ್ಡೆಯಿಂದ ಕರಾವಳಿ ಜಂಕ್ಷನ್ ತನಕ ಮೆರವಣಿಗೆ, ಆ.3ರಂದು ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮ ಉದ್ಘಾಟನೆ, ಬನ್ನಂಜೆ ರಚಿತ ಹಾಡುಗಳ ಗಾಯನ ಕಾರ್ಯ ಕ್ರಮಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಭೆಯಲ್ಲಿ ಉದ್ಯಮಿ ಯು.ವಿಶ್ವನಾಥ ಶೆಣೈ, ಡಾ.ಮಾಧವಿ ಭಂಡಾರಿ, ನಾರಾಯಣ ಮಡಿ ಉಪಸ್ಥಿತರಿ ದ್ದರು. ಸಮಿತಿ ಸಂಚಾಲಕ ರವಿರಾಜ್ ಎಚ್. ಪಿ. ಸ್ವಾಗತಿಸಿದರು. ಅಸ್ಟ್ರೋ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಾರ್ದನ್ ಕೊಡವೂರು ನಿರೂಪಿಸಿದರು. ಪ್ರೊ.ಸದಾಶಿವ ರಾವ್ ವಂದಿಸಿದರು.





